News Hour: ಯುರೋಪ್‌ ಟೂರ್‌ನಿಂದ ಸರ್ಕಾರಕ್ಕೆ 'ಕಮೀಷನ್‌ ಬಾಂಬ್‌' ಗಿಫ್ಟ್‌ ತಂದ ಎಚ್‌ಡಿಕೆ!

ಯುರೋಪ್‌ ಪ್ರವಾಸದಿಂದ ರಿಟರ್ನ್‌ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಅಲ್ಲಿಂದ ಸರ್ಕಾರಕ್ಕೆ ಕಮೀಷನ್‌ ಬಾಂಬ್‌ ಆರೋಪದ ಗಿಫ್ಟ್‌ ತಂದಿದ್ದಾರೆ. ಬೆಂಗಳೂರಿಗೆ ಬಂದವರೇ ಸರ್ಕಾರ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

First Published Aug 4, 2023, 11:29 PM IST | Last Updated Aug 4, 2023, 11:29 PM IST

ಬೆಂಗಳೂರು (ಆ.4): ಯುರೋಪ್‌ ಪ್ರವಾಸದಿಂದ ಬರುತ್ತಿದ್ದಂತೆ, ಏರ್‌ಪೋರ್ಟ್‌ನಲ್ಲಿಯೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರ್ಕಾರದಿಂದ ವಿರುದ್ಧ ಮತ್ತೊಂದು ಬಾಂಬ್‌ ಎಸೆದಿದ್ದಾರೆ. ವರ್ಗಾವಣೆಯ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರು ಇದ್ದರು ಎಂದು ಹೇಳಿರುವುದಕ್ಕೆ ಕೈ ಪಡೆ ಕುದ್ದು ಹೋಗಿದೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದವರೇ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಪರ್ಸಂಟೇಜ್‌ ಬಾಂಬ್‌ ಹಾಕಿದ್ದಾರೆ. ಬಿಡಿಎ ಅಧಿಕಾರಿಗಳಿಗೆ 250 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವ ಟಾಸ್ಕ್‌ ಕೊಟ್ಟಿದ್ದು, ಈ ಹಣವನ್ನು ದಿಲ್ಲಿಗೆ ಕಳಿಸಬೇಕು ಎಂದು ಸರ್ಕಾರ ಹೇಳಿದ್ದಾಗಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಬಾಂಬ್‌ಗೆ ಕಾಂಗ್ರೆಸ್‌ ಕೊತಕೊತ..!

ಇನ್ನೊಂದೆಡೆ ರಾಹುಲ್‌ ಗಾಂಧಿ ಅವರ 2 ವರ್ಷದ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ. ರಾಹುಲ್‌ ನೀಡಿರುವ ಹೇಳಿಕೆ ಆಕ್ಷೇಪಾರ್ಹ ಆಗಿದ್ದರೂ, ಅವರಿಗೆ ಗರಿಷ್ಠ ಶಿಕ್ಷೆ ನೀಡಿದಕ್ಕೆ ಕಾರಣವೇನು ಅನ್ನೋದನ್ನು ತಿಳಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Video Top Stories