ಜೆಡಿಎಸ್‌ನಿಂದ ಆಚೆ ಹೋಗಲು ಜಿಟಿ ದೇವೇಗೌಡ್ರಿಗೆ ಗ್ರೀನ್ ಸಿಗ್ನಲ್
ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿನಿಂದಲೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ನೊಂದಿಗೆ ಅಷ್ಟಕಷ್ಟೇ ಅನ್ನುವಂತಿದ್ದಾರೆ. ಅದು ಅದು ಪದೇ ಪದೇ ಸಾಬೀತಾಗ್ತಿದೆ.
ಬೆಂಗಳೂರು, [ಫೆ.17]: ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿನಿಂದಲೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ನೊಂದಿಗೆ ಅಷ್ಟಕಷ್ಟೇ ಅನ್ನುವಂತಿದ್ದಾರೆ.ಅದು ಪದೇ ಪದೇ ಸಾಬೀತಾಗ್ತಿದೆ.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ನಿಂದ ಯಾರು ವೋಟ್ ಮಾಡಬಾರದು ಎನ್ನುವ ಪಕ್ಷದಿಂದ ಆದೇಶವಿದ್ರೂ, ಜಿಟಿ ದೇವೇಗೌಡ ಮಾತ್ರ, ವೋಟ್ ಮಾಡಿ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮತ್ತೊಂದೆಜ್ಜೆ ಮುಂದಿಟ್ಟ ದೇವೇಗೌಡ: ಅಚ್ಚರಿ ಮೂಡಿಸಿದ ಜಿಟಿಡಿ ನಡೆ
ಇದಲ್ಲದೇ ಜೆಡಿಎಸ್ ಶಾಸಕಾಂಗ ಸಭೆ ಕಡೆ ತಲೆಯನ್ನೂ ಹಾಕದೇ ಇರೋದು ಕುಮಾರಣ್ಣ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಪರೋಕ್ಷವಾಗಿ ಜೆಡಿಎಸ್ ನಿಂದ ಹೊರಹೋಗುವಂತೆ ಹೇಳಿದ್ದಾರೆ.