ಚನ್ನಪಟ್ಟಣದಿಂದಲೇ ಸ್ಪರ್ಧೆ, ನಾನು ಟಾಕೀಸ್ ಟೂರ್ ಅಲ್ಲ ಎಂದು ಸಿದ್ದುಗೆ ಗುದ್ದಿಗ ಹೆಚ್‌ಡಿಕೆ!
ಹಲಾಲ್ ವಿರುದ್ಧ ಧರ್ಮದಂಗಲ್, ಮಂಡ್ಯದಲ್ಲಿ ಅಭಿಯಾನ, ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್‌ಗಳಿಂದ ದುಪ್ಪಟ್ಟ ದರ, ರಾಯಚೂರಿನಲ್ಲಿ ಭಾರತ್ ಜೋಡೋ ಸಮಾರೋಪ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಟಿ ರಮ್ಯಾ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.
ನಾನು ಟೂರಿನ ಟಾಕಿಸ್ ಅಲ್ಲ, ಒಂದು ಕಡೆಯಿಂದ ಮತ್ತೊಂದು ಕಡೆ ಸ್ಪರ್ಧಿಸುವುದಿಲ್ಲ. ಚನ್ನಪಟ್ಟಣದಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ನನ್ನ ಕಣ್ಣುಗಳಿದ್ದಂತೆ. ಎರಡು ಕ್ಷೇತ್ರದ ಜನರು ನನ್ನನ್ನು ಬೆಳೆಸಿದ್ದಾರೆ. ಹಲವು ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರು ಕೇಳಿಕೊಂಡಿದ್ದಾರೆ. ಆದರೆ ನಾನು ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಉತ್ಸಾಹದಲ್ಲಿರುವ ಕುಮಾರಸ್ವಾಮಿಗೆ ಮಾಜಿ ಆಪ್ತ ಜಮೀರ್ ಅಹಮ್ಮದ್ ಟಾಂಗ್ ನೀಡಿದ್ದಾರೆ. ನೀವು 59 ಸ್ಥಾನ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.