Asianet Suvarna News Asianet Suvarna News

'ಗಂಡಸ್ತನದ ರಾಜಕೀಯ ಮಾಡಿ..' ಡಿಕೆಶಿ-ಎಚ್‌ಡಿಕೆ ನಡುವೆ ನಾನಾ ನೀನಾ ಟಾಕ್​ಫೈಟ್!

ಒಕ್ಕಲಿಗ ನಾಯಕರ ನಡುವೆ ನಾನಾ ನೀನಾ ಟಾಕ್​ಫೈಟ್ ಶುರುವಾಗಿದೆ.  ಬಿಜೆಪಿ ಜೆಡಿಎಸ್​ನದ್ದು ಪಾಪದ ಯಾತ್ರೆ ಎಂದು ಡಿಕೆಶಿ ಡಿಚ್ಚಿ ಹೊಡೆದಿದ್ದಾರೆ. ಇದಕ್ಕೆ ಗಂಡಸ್ಥನದ ರಾಜಕೀಯ ಮಾಡಿ ಎಂದು ದಳಪತಿ ಹೇಳಿದ್ದಾರೆ.
 

First Published Aug 9, 2024, 11:45 PM IST | Last Updated Aug 9, 2024, 11:45 PM IST

ಬೆಂಗಳೂರು (ಆ.9): ಮೈಸೂರಿನ ಪ್ರಮುಖ ಸರ್ಕಲ್​ಗಳಲ್ಲಿ ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ’ ಹೆಸೆರಿನಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಭಾರಿ ವಿವಾದಕ್ಕೆ ಕಾರಣವಾಯ್ತು. ಈ ಫ್ಲೆಕ್ಸ್​ನಲ್ಲಿ ಕುಮಾರಸ್ವಾಮಿಗೆ ಮುಡಾ ಕೊಟ್ಟ ಸೈಟ್​ ಹಾಗೂ ಡಿ-ನೋಟಿಫಿಕೇಷನ್ ವಿವರ ಉಲ್ಲೇಖಿಸಿದ್ದು ದಳಪತಿಗಳ ಕೆಂಗಣ್ಣಿಗೆ ಕಾರಣವಾಯಿತು. ಹೀಗಾಗಿ ಫ್ಲೆಕ್ಸ್ ತೆರವು ಮಾಡುವಂತೆ ಜೆಡಿಎಸ್ ನಾಯಕ ಸಾರಾ ಮಹೇಶ್​ ಪ್ರತಿಭಟನೆ ನಡೆಸಿದ್ದರು.

ಡಿಕೆಶಿ ಆರೋಪಗಳಿಗೆ ಕೆರಳಿ ಕೆಂಡವಾದ ಕೇಂದ್ರ ಸಚಿವ ಕುಮಾರಸ್ವಾಮಿ, ಡಿಕೆಶಿ ಗಂಡಸ್ತನದ ರಾಜಕಾರಣ ಮಾಡಲಿ. ನನ್ನ ಕುಟುಂಬದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ. ನಪುಂಸಕರ ರಾಜಕಾರಣ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

'ಫಸ್ಟ್ ನಮ್ಮದೇನಿದೆ ಬಿಚ್ಚಿ; ನಿಮ್ಮದೇನಿದೆ ನಾವು ಬಿಚ್ತೇವೆ' ಡಿಕೆಶಿ-ಎಚ್‌ಡಿಕೆ ನಡುವೆ ನಿಲ್ಲದ ಆಸ್ತಿ ಕುಸ್ತಿ!

ಡಿಕೆಶಿ ಮೊದಲು ನೆಟ್ಟಗೆ ಬದುಕೋದನ್ನು ಕಲಿಯಲಿದೆ. ಎಲ್ಲಿದೆ 50 ಡಿನೋಟಿಫಿಕೇಶನ್‌ ಕೇಸ್‌ ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. ಅವರಿಗೇನಾದರೂ ಕನಸು ಬಿದ್ದಿತ್ತಾ ಅಥವಾ ಅಜ್ಜಯ್ಯ ಹೇಳಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

Video Top Stories