Asianet Suvarna News Asianet Suvarna News

'ಫಸ್ಟ್ ನಮ್ಮದೇನಿದೆ ಬಿಚ್ಚಿ; ನಿಮ್ಮದೇನಿದೆ ನಾವು ಬಿಚ್ತೇವೆ' ಡಿಕೆಶಿ-ಎಚ್‌ಡಿಕೆ ನಡುವೆ ನಿಲ್ಲದ ಆಸ್ತಿ ಕುಸ್ತಿ!

ನೋಡಿಪಾ.. ಅದೇನೋ ಹೇಳ್ತಾರಲ್ಲ ದಿನಾ ಸಾಯೋರಿಗೆ ಅಳೋರ್ಯಾರು ಅಂತಾ. ಇವರದೆಲ್ಲ ದಿನಾ ಗೋಳು ಇದ್ದಿದ್ದೆ ಎಂದು ಮುಡಾ, ವಾಲ್ಮೀಕಿ ಹಗರಣ ವಿಚಾರಕ್ಕೆ ಪ್ರತಿಪಕ್ಷಗಳ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಲೇವಡಿ ಮಾಡಿದರು.

Karnataka dcm dk shivakumar outraged against hd kumaraswamy family rav
Author
First Published Aug 8, 2024, 4:57 PM IST | Last Updated Aug 8, 2024, 4:57 PM IST

ಬೆಂಗಳೂರು ಆ.8): ನೋಡಿಪಾ.. ಅದೇನೋ ಹೇಳ್ತಾರಲ್ಲ ದಿನಾ ಸಾಯೋರಿಗೆ ಅಳೋರ್ಯಾರು ಅಂತಾ. ಇವರದೆಲ್ಲ ದಿನಾ ಗೋಳು ಇದ್ದಿದ್ದೆ ಎಂದು ಮುಡಾ, ವಾಲ್ಮೀಕಿ ಹಗರಣ ವಿಚಾರಕ್ಕೆ ಪ್ರತಿಪಕ್ಷಗಳ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಲೇವಡಿ ಮಾಡಿದರು.

ನಾವು ಇವರ ವಿರುದ್ಧ ಹೋರಾಟ ಮಾಡಿಕೊಂಡೇ ಈ ಸ್ಥಾನಕ್ಕೆ ಬಂದಿದ್ದೇವೆ. ಹಾಗಂತ ಇಲ್ಲಿಗೆ ನಿಲ್ಲಿಸೋದಿಲ್ಲ. ಮುಂದೆಯೂ ಹೋರಾಟ ಮಾಡುತ್ತೇವೆ. ದೇವೇಗೌಡರ ಕುಟುಂಬದ ದಾಖಲೆ ಬಿಚ್ಚಿಡುವ ಕೆಲಸ ಮಾಡಲೇಬೇಕಾಗುತ್ತದೆ. ಇದಕ್ಕೆಲ್ಲ ಒಳ್ಳೆಯ ಟೈಮ್, ಮುಹೂರ್ತ ಬೇಕು. ಶುಭ ವಾರ, ಶುಭ ನಕ್ಷತ್ರ ನೋಡಬೇಕಾಗುತ್ತೆ. ನಾವು ಈಗಾಗಲೇ ಅವರಿಗೆ ಹೇಳಿದ್ದೇವೆ. ನಮ್ಮದೇನಿದೆ ಅನ್ನೋದು ಮೊದಲು ಬಿಚ್ಚಿ, ಅನಂತರ ನಿಮ್ಮದು ಬಿಚ್ಚುತ್ತೇವೆ ಅಂತಾ. ನಾನು ಈ ಹಿಂದೆಯೇ ಎರಡು ಬಾರಿ ಬಹಿರಂಗ ಚರ್ಚೆಗೆ ಕರೆದಿದ್ದೇನೆ ಅವರು ಬರಲಿಲ್ಲ. ಈಗ ಅವರಣ್ಣ ರೇವಣ್ಣ ಇದ್ದಾರೆ ಅವರನ್ನೇ ಕಳಿಸಲಿ. ಟಿವಿಯಲ್ಲಿ ಬೇಡ, ಅಧಿವೇಶನದಲ್ಲಿ ಚರ್ಚೆ ಮಾಡೋಣ. ಈ ವಿಚಾರ ಮುಂದಿನ ಜನರೇಷನ್‌ಗೆ ಕೂಡ ಗೊತ್ತಾಗಬೇಕು ಎಂದು ಸವಾಲು ಹಾಕಿದರು.

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ

Latest Videos
Follow Us:
Download App:
  • android
  • ios