ದೇವೇಗೌಡ್ರ ಮಧ್ಯಸ್ಥಿಕೆಯಿಂದಲೂ ಬಗೆಹರಿಯದ ಹಾಸನ ಟಿಕೆಟ್ ಕಚ್ಚಾಟ!

ಹಾಸನ ಜೆಡಿಎಸ್ ಟಿಕೆಟ್ ಫೈನಲ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ದೇವೇಗೌಡ ಅವರ ಬಳಿ ಬಂದು ಮಾತನಾಡಿದರೂ ಸಮಸ್ಯೆ ಬಗೆಹರಿದಿಲ್ಲ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.3):  ಹಾಸನ ಜೆಡಿಎಸ್ ಟಿಕೆಟ್ ಫೈನಲ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಸಿಗೋದು ಡೌಟು. ಮಾತುಕತೆಗಾಗಿ ದೇವೇಗೌಡರ ಮನೆಗೆ ಆಗಮಿಸಿದ್ದ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಅಸಮಾಧಾನದಿಂದಲೇ ಮನೆಯಿಂದ ಹೊರ ಬಂದಿದ್ದಾರೆ. ಹಾಸನ ಟಿಕೆಟ್ ಕೊಡಲೇ ಬೇಕು ಎಂದು ರೇವಣ್ಣ ದಂಪತಿ ಮಾತುಕತೆಯಲ್ಲಿ ಪಟ್ಟು ಹಿಡಿದಿದ್ದರು. ಆದರೆ ದೇವೇಗೌಡ ಇವರ ಮಾತಿಗೆ ಸೊಪ್ಪು ಹಾಕಿಲ್ಲ. ಎಂ ಎಲ್ ಸಿ ಮಾಡುವುದಾಗಿ ದೇವೇಗೌಡರು ಭರವಸೆ ನೀಡಿದರೂ. ಅದರ ಅವಶ್ಯಕತೆ ನಮಗಿಲ್ಲ ಎಂದ ಭವಾನಿ ರೇವಣ್ಣ ಹೇಳಿದ್ದಾರೆನ್ನಲಾಗಿದೆ. ಅಂತೂ ಇಂತೂ ಹಾಸನ ಟಿಕೆಟ್ ಹಂಚಿಕೆ ಮಾತ್ರ ಇನ್ನು ಕೂಡ ಕಗ್ಗಂಟಾಗಿಯೇ ಇದೆ.

Related Video