ರಾಹುಕಾಲ ಬಂದು ಬಿಡುತ್ತೆ ಅಂತ, ತಮ್ಮ ಬರುವ ಮುನ್ನವೇ ದೀಪ ಬೆಳಗಿಸಿದ ಶಾಸಕ ಹೆಚ್.ಡಿ. ರೇವಣ್ಣ

ಜೆಡಿಎಸ್ ಸಭೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬರುವುದರೊಳಗೆ ರಾಹುಕಾಲ ಬಂದುಬಿಡುತ್ತದೆ ಅಂತಾ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ತರಾತುರಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

Share this Video
  • FB
  • Linkdin
  • Whatsapp

ಹಾಸನ (ಮಾ.13): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವ ಸಿದ್ದತೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕಾರ್ಯಕ್ರಮ ಉದ್ಘಾಟನೆಗಾಗಿ ಮುಖ್ಯ ಅತಿಥಿ ಕುಮಾರಸ್ವಾಮಿ ಅವರಿಗೆ ಕಾಯಲಾಗುತ್ತಿತ್ತು. ಆದರೆ, ಇನ್ನೂ ತಡ ಮಾಡಿದರೆ ರಾಹುಕಾಲ ಬಂದುಬಿಡುತ್ತದೆ ಅಂತಾ ಕುಮಾರಸ್ವಾಮಿಗಾಗಿ ಕಾಯದೇ ಶಾಸಕ ಹೆಚ್.ಡಿ.ರೇವಣ್ಣ ಅವರು ವೇದಿಕೆ ಮೇಲಿದ್ದ ಸ್ಥಳೀಯ ನಾಯಕರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಘಟನೆ ಹಾಸನ ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಿತು. ಜೆಡಿಎಸ್ ಶಾಸಕರು, ಮಾಜಿ ಜಿ.ಪಂ., ತಾ.ಪಂ.,ಸದಸ್ಯರು, ಹಾಲಿ, ಮಾಜಿ ನಗರಸಭೆ, ಪುರಸಭೆ, ಗ್ರಾ.ಪಂ. ಸದಸ್ಯರೊಂದಿಗೆ ಸಭೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ಇದು ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವ ಸಿದ್ದತೆ ಸಭೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್‌ರೇವಣ್, ಎಚ್.ಡಿ.ರೇವಣ್ಣ, ಶಾಸಕ ಸ್ವರೂಪ್‌ಪ್ರಕಾಶ್, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಜೆಡಿಎಸ್ ನಾಯಕರು ಉಪಸ್ಥಿತಿ ಇರಲಿದ್ದಾರೆ.

Related Video