ಬಳ್ಳಾರಿ ಆಯ್ತು, ಈಗ ಮೈಸೂರು ವಿಭಜನೆಗೆ ಕೂಗು! ಹೊಸ ಜಿಲ್ಲೆಯಾಗುತ್ತಾ ‘ಹಕ್ಕಿ’ ಗೂಡು?

ಅನರ್ಹ ಶಾಸಕ ಎಚ್. ವಿಶ್ವನಾಥ್ ಈಗ ಬಿಜೆಪಿ ಸರ್ಕಾರದ ಮುಂದೆ ಹೊಸದೊಂದು ಬೇಡಿಕೆಯನ್ನಿಟ್ಟಿದ್ದಾರೆ.  ‘ಹಳ್ಳಿಹಕ್ಕಿ’ ಇಟ್ಟಿರುವ ಹೊಸ ಬೇಡಿಕೆ ಕಮಲ ಪಾಳೆಯಕ್ಕೆ ತಲೆನೋವಾಗಿ ಪರಿಣಮಿಸುವುದು ಖಚಿತ! 

Share this Video
  • FB
  • Linkdin
  • Whatsapp

ಮೈಸೂರು (ಅ.14): ಅನರ್ಹ ಶಾಸಕ ಎಚ್. ವಿಶ್ವನಾಥ್ ಈಗ ಬಿಜೆಪಿ ಸರ್ಕಾರದ ಮುಂದೆ ಹೊಸದೊಂದು ಬೇಡಿಕೆಯನ್ನಿಟ್ಟಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾದವರು. ಬಳಿಕ ಕಮಲ ಪಡೆಯ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ.

ಮುಂಬರುವ ಉಪ-ಚುನಾವಣೆಯಲ್ಲಿ ಹುಣಸೂರಿನಿಂದ ತನ್ನ ಮಗನಿಗೆ ಟಿಕೆಟ್ ಕೊಡಿಸಲು ವಿಶ್ವನಾಥ್ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ‘ಹಳ್ಳಿಹಕ್ಕಿ’ ಇಟ್ಟಿರುವ ಹೊಸ ಬೇಡಿಕೆ ಕಮಲ ಪಾಳೆಯಕ್ಕೆ ತಲೆನೋವಾಗಿ ಪರಿಣಮಿಸುವುದು ಖಚಿತ! 

ಇನ್ನೊಂದು ಕಡೆ, ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂಗ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದಕ್ಕೆ ಬಿಜೆಪಿ ಪಾಳೆಯದಲ್ಲೇ ವಿರೋಧ ವ್ಯಕ್ತವಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. 

ಕೆಲದಿನಗಳ ಹಿಂದೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೂಡಾ ತುಮಕೂರು ಜಿಲ್ಲೆಯನ್ನು ಇಬ್ಭಾಗ ಮಾಡಿ, ಮಧುಗಿರಿ ಜಿಲ್ಲೆ ರಚಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Video