Ground Report: ಬೆಳಗಾವಿಯಲ್ಲಿ ಹೇಗಿದೆ ಟಿಕೆಟ್‌ ಫೈಟ್‌?

ಕುಂದಾನಗರಿಯಲ್ಲಿ ರಂಗೇರಿದ ಚುನಾವಣಾ ಅಖಾಡ. ಕಾಂಗ್ರೆಸ್‌ ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿ ಆರಂಭವಾಗಿದೆ. ಸವದತ್ತಿಯಲ್ಲಿ ಮಾಮನಿ ಕ್ಷೇತ್ರವನ್ನು ಕಸಿಯಲು ಕಾಂಗ್ರೆಸ್‌ನಿಂದ ಭರಪೂರ ಸಿದ್ಧತೆ. ಬೆಳಗಾವಿ ದಕ್ಷಿಣದಲ್ಲಿ ಯಾರಿಗೆ ಸಿಗಲಿದೆ ಟಿಕೆಟ್. ಬೆಳಗಾವಿ ಉತ್ತರದಲ್ಲಿ ಮತ್ತೆ ಕಮಲ ಅರಳುತ್ತಾ?

Share this Video
  • FB
  • Linkdin
  • Whatsapp

ಬೆಳಗಾವಿ (ಡಿ.19): ಕುಂದಾನಗರಿಯಲ್ಲಿ ರಂಗೇರಿದ ಚುನಾವಣಾ ಅಖಾಡ. ಕಾಂಗ್ರೆಸ್‌ ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿ ಆರಂಭವಾಗಿದೆ. ಸವದತ್ತಿಯಲ್ಲಿ ಮಾಮನಿ ಕ್ಷೇತ್ರವನ್ನು ಕಸಿಯಲು ಕಾಂಗ್ರೆಸ್‌ನಿಂದ ಭರಪೂರ ಸಿದ್ಧತೆ. ಬೆಳಗಾವಿ ದಕ್ಷಿಣದಲ್ಲಿ ಯಾರಿಗೆ ಸಿಗಲಿದೆ ಟಿಕೆಟ್. ಬೆಳಗಾವಿ ಉತ್ತರದಲ್ಲಿ ಮತ್ತೆ ಕಮಲ ಅರಳುತ್ತಾ? ಎನ್ನುವ ಪ್ರಶ್ನೆ ಕಾಡುತ್ತಿದೆ.

ಬೆಳಗಾವಿ ಗ್ರಾಮೀಣ ಭಾಗದಿಂದ ಸ್ಪರ್ಧಿಸಲು ಲಕ್ಷ್ಮೀ ಹೆಬ್ಬಾಳ್ಕರ್‌ ಸಿದ್ಧರಾಗಿದ್ದಾರೆ. ಗೋಕಾಕ್‌ನಲ್ಲಿ ಜಾರಕಿಹೊಳಿ ಪುತ್ರ ಕೂಡ ಟಿಕೆಟ್‌ ಆಕಾಂಕ್ಷಿ ಆಗಿದ್ದಾನೆ. ಅರಬಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ವೈಯಕ್ತಿನ ವರ್ಚಸ್ಸಿನ ಬಲವಿದೆ. ಯಮಕನಮರಡಿಯಲ್ಲಿ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಸ್ಪರ್ಧಿಸುವವರು ಯಾರು? ಯಾದವಾಡದಲ್ಲಿ ಹಾಲಿ ಶಾಸಕ ಮಹದೇವಪ್ಪ ಸ್ಪರ್ಧೆಗೆ ಅಪಸ್ವರ ಕೇಳಿಬಂದಿದೆ. ಹಾಗಾದರೆ ಯಾದವಾಡಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಯಾರು? ಇದೆಲ್ಲದಕ್ಕೆ ಉತ್ತರ ಏಷ್ಯಾನೆಟ್ ಸುವರ್ಣಾ ನ್ಯೂಸ್‌ ಗ್ರೌಂಡ್‌ ರಿಪೋರ್ಟ್ ನಲ್ಲಿದೆ ನೋಡಿ.

Related Video