ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್? ಅರ್ಜಿ ಸಲ್ಲಿಸೋದು ಹೇಗೆ?
ಇಂದು ರಾಜ್ಯ ಸರ್ಕಾರದ ಮೂರನೇ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆ ಜಾರಿ ವಿಚಾರ ಚರ್ಚೆಗೆ ಬರಲಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ.
ಇಂದು ರಾಜ್ಯ ಸರ್ಕಾರದ ಮೂರನೇ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆ ಜಾರಿ ವಿಚಾರ ಚರ್ಚೆಗೆ ಬರಲಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ.ಇನ್ನು ಅರ್ಜಿ ಸಲ್ಲಿಸೋದು ಹೇಗೆ ಎಂದು ನೋಡುವುದಾದರೆ , ಗೃಹಲಕ್ಷ್ಮಿ ಹೆಸರಿನಲ್ಲೇ ನೂತನ ಆಪ್ ಬರಲಿದ್ದು , ಫ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಅದಲ್ಲದೇ ಸೇವಾಸಿಂಧೂ ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಸರ್ಕಾರ ಕೆಲವು ಗೈಡ್‌ಲೈನ್ಸ್ ನೀಡಿದ್ದು, ಅದರಲ್ಲಿ APL, BPL ಅಂತ್ಯೋದಯ ಕಾರ್ಡ್‌ಗಳಲ್ಲಿ ಮನೆ ಒಡತಿ ಹೆಸರಿರಬೇಕು, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಅನ್ವಯ ಅರ್ಜಿ ಆಹ್ವಾನಕ್ಕೆ ಆಧಾರ್ ಮೊಬೈಲ್ ನಂಬರ್ ಕಡ್ಡಾಯ , ಬ್ಯಾಂಕ್ ಖಾತೆಯೊಂದಿಗೆ ಮೋಬೈಲ್ ನಂಬರ್ ಲಿಂಕ್ ಆಗಿರಬೇಕು .ಯಜಮಾನಿ ,ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು ಹಾಗೇ ಯಜಮಾನಿ, ಯಜಮಾನ GST ರಿಟರ್ನ್ಸ್ ಆಗಿರಬಾರದು.