ತೆರೆಗೆ ಬರಲು ಸಿದ್ಧವಾಗಿದೆ ಯೋಗಿ ಬಾಬಾನ ಆತ್ಮಕತೆ: ಜನ ಕೇಳರಿಯದ ಕತೆ ಹೇಳುತ್ತಾ 'ಅಜೇಯ ಸಿನಿಮಾ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ವಧವಾಗಿದ್ದು,. ಉತ್ತರ ಪ್ರದೇಶದ ರಾಜಕೀಯ ಭವಿಷ್ಯವನ್ನು ಬದಲಿಸಿದ ಯೋಗಿ ಅವರ ಸಾಧನೆಗಳು ತೆರೆಮೇಲೆ ಬಂದು ಸಿನಿಪ್ರಿಯರನ್ನು ರಂಜಿಸುವ ನಿರೀಕ್ಷೆ ಇದೆ.

Share this Video
  • FB
  • Linkdin
  • Whatsapp

ಯೋಗಿ ಆದಿತ್ಯನಾಥ್, ಈ ಹೆಸರು ಈಗ ಬರೀ ಹೆಸರಲ್ಲ.. ಪವರ್ ಹೌಸ್.. ಉತ್ತರ ಪ್ರದೇಶದಂಥಾ ಉತ್ತರ ಪ್ರದೇಶವನ್ನ ಆಳೋದೇ ಒಂದು ಸವಾಲು.. ಆದ್ರೆ, ಆಳೋದಷ್ಟೇ ಅಲ್ಲ.. ಆ ಇಡೀ ರಾಜ್ಯದ ಭವಿಷ್ಯವನ್ನೇ ಬದಲಾಯಿಸಿರೋ ಸಂತ, ಮಹಾಂತ, ಈ ಯೋಗಿ ಆದಿತ್ಯನಾಥ್..ನಾವಿವತ್ತು ಅವರ ಬದುಕಿನ ಒಂದಷ್ಟು ಮಹತ್ತರ ಘಟ್ಟಗಳನ್ನ ಇಣುಕಿ ನೋಡೋ ಪ್ರಯತ್ನ ಮಾಡಣ.. ಅದ್ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ನೀವು ಈ ಸ್ಟೋರಿನಾ ಕಂಪ್ಲೀಟಾಗಿ ನೋಡ್ಬೇಕು.. 

ಇವತ್ತು ಅದೇ ಯೋಗಿ ಆದಿತ್ಯನಾಥರ ಬಗ್ಗೆ ಒಂದು ಸಿನಿಮಾ ಬರ್ತಾ ಇದೆ.. ನಿಜ ಹೇಳ್ಬೇಕು ಅಂದ್ರೆ, ಯೋಗಿ ಲೈಫ್ ಸ್ಟೋರಿ ಇದ್ಯಲ್ಲಾ, ಅದು ಸಿನಿಮಾಗೂ ಮೀರಿದ ರಣರೋಚಕ ಜರ್ನಿ.. ಹಾಗಾದ್ರೆ ಈ ರಿಯಲ್ ಹೀರೋ ಸಿನಿಮಾ, ರೀಲ್ ಸಿನಿಮಾದಲ್ಲಿ ಹೇಗೆ ಮೂಡಿಬರಲಿದೆ? ಅದನ್ನೊಂದ್ ಸಲ ನೋಡ್ಬಿಡಣ..

ಯೋಗಿ ಆದಿತ್ಯನಾಥ್ ಅನ್ನೋ ಫೈರ್ ಬ್ರಾಂಡಿನ ಅಸಲಿ ಕತೆ.. ಒಂದೊಂದು ನಿರ್ಧಾರ, ಒಂದೊಂದು ಆಜ್ಞೆ, ಎಲ್ಲವೂ ಇತಿಹಾಸ ಸೃಷ್ಟಿಸಿರೋದನ್ನ ಉತ್ತರ ಪ್ರದೇಶ ಸಾಕ್ಷಿಯಾಗಿ ನೋಡಿದೆ.. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಪಟ್ಟಕ್ಕೇರಿದಾಗ ಉತ್ತರ ಪ್ರದೇಶದ ಪರಿಸ್ಥಿತಿ ಅಷ್ಟಕ್ಕಷ್ಟೆ ಇತ್ತು.. ಕ್ರೈಂ ರೇಟ್ ಗಗನಕ್ಕೇರಿತ್ತು.. ಮಾಫಿಯಾ ರಾಜ್ ತಾಂಡವವಾಡ್ತಿತ್ತು.. ಭ್ರಷ್ಟಾಚಾರ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣ್ತಾ ಇತ್ತು.. ಹೀಗೆ ಸಮಸ್ಯೆಗಳ ಸಾಗರವೇ ಇತ್ತು.. ಆಮೇಲೇನಾಯ್ತು?

ಜನಕ್ಕೆ ಒಂದು ಸಲ ನಂಬಿಕೆ ಬಂದ್ರೆ ಆಯ್ತು, ಸುಲಭವಾಗಿ ಕೈಬಿಡೊಲ್ಲ.. ಅದರಲ್ಲೂ ಯೋಗಿ, ಬರೀ ಯೋಗಿ ಅಲ್ಲ.. ಉತ್ತರ ಪ್ರದೇಶದ ಪಾಲಿಗೆ ಉಪಯೋಗಿ.. ಈ ಮಾತನ್ನ ಖುದ್ದು ಮೋದಿ ಅವರೇ ಹೇಳಿದ್ರು.. 

ಅಸಾಧ್ಯ ಸಾಧನೆ ಮಾಡಿದ್ದ ಯೋಗಿ ಎದುರು, ಒಂದು ಅಗ್ನಿ ಪರೀಕ್ಷೆ ಎದುರಾಗಿತ್ತು.. ಅದೇ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ, 2022.. ಯಾಕಂದ್ರೆ, ಉತ್ತರ ಪ್ರದೇಶದ ಹಿಸ್ಟರಿನೇ ಅಂಥಾದ್ದು.. ಯಾಕಂದ್ರೆ, ಅದು ಸಾಮಾನ್ಯ ಚುನಾವಣೆಯಾಗಿರ್ಲಿಲ್ಲ.. 35 ವರ್ಷಗಳಿಂದ ಯಾವ ಮುಖ್ಯಮಂತ್ರಿ ಕೂಡ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಇತಿಹಾಸವೇ ಉತ್ತರ ಪ್ರದೇಶದಲ್ಲಿ ಇರ್ಲಿಲ್ಲ.. ಆ ಶಕುನವನ್ನೂ ಮುರಿಯೋಕೆ ಹೊರಟಿದ್ದರು ಯೋಗಿ ಆದಿತ್ಯನಾಥ್..

ನೋಡಿದ್ರಲ್ಲಾ ಅಜೇಯ ಆದಿತ್ಯ ಅಸಲಿ ಕಹಾನಿ.. ಈ ಕತೆಯನ್ನ ಆಧರಿಸಿಯೇ ಸಿನಿಮಾ ಬರ್ತಾ ಇದೆ.. ಅದರಲ್ಲಿ ಇನ್ಯಾವ ವಿಚಾರ ಅಡಗಿದ್ಯೋ ನೋಡಣ.. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್.. ನಮಸ್ಕಾರ..

Related Video