92ರ ಇಳಿ ವಯಸ್ಸಲ್ಲೂ ದೇವೇಗೌಡರ ಸಿಂಹ ಘರ್ಜನೆ: ಮೊಮ್ಮಗನ ಕರ್ಮಕಾಂಡದ ಬಗ್ಗೆ ಗೌಡರಿಂದ ನ್ಯಾಯ!

ತೊಂಬತ್ತೆರಡರ ಹರೆಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೆ ರಾಜಕೀಯ ರಣಕಣಕ್ಕೆ ಮರಳಿದ್ದಾರೆ. ಯಾರ ವಿರುದ್ಧ ಈ ಹೋರಾಟ, ಯಾರಿಗೆ ಈ ಸವಾಲು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ದೆಹಲಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹೆಮ್ಮೆಯ ಕನ್ನಡಿಗ. ಹಳ್ಳಿಯಿಂದ ದಿಲ್ಲಿವರೆಗೆ ರಾಜಕಾರಣ ಮಾಡಿ ಸೈ ಎನಿಸಿಕೊಂಡ ಗಟ್ಟಿಗ. ರಾಜಕೀಯ ರಣರಂಗದಲ್ಲಿ ಶಸ್ತ್ರತ್ಯಾಗ ಮಾಡಿದ್ದ ಭೀಷ್ಮ ಈಗ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. 92ರ ವಯೋವೃದ್ಧ ಗೌಡರು, ಸಿಂಹ ಘರ್ಜನೆ ಮಾಡಿದ್ದಾರೆ. ರಾಜಕೀಯ ವೈರಿಗಳಿಗೆ ರಣವೀಳ್ಯ ಕೊಟ್ಟಿದ್ದಾರೆ. ಮೊಮ್ಮಗನ ಪ್ರಮಾದವನ್ನು ನೆನೆದು ನ್ಯಾಯ ಮಾತನ್ನಾಡಿದ್ದಾರೆ. ಅಷ್ಟಕ್ಕೂ ಶಾಂತ ಸಮುದ್ರದಂತೆ ಸೈಲೆಂಟಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇದ್ದಕ್ಕಿದ್ದಂತೆ ರುದ್ರ ಸಮುದ್ರದಂತೆ ಭೋರ್ಗರೆದದ್ದು ಯಾಕೆ? ಗೌಡರ ಕೋಪ ಯಾರ ಮೇಲೆ? ಎನ್ನುವುದೇ ಇವತ್ತಿನ ಸುವರ್ಣ ಸ್ಪೆಷಲ್ ಆಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 92ನೇ ವಯಸ್ಸಲ್ಲಿ ನಾನು ಹೋರಾಟ ಮಾಡ್ತೇನೆ ಅಂತ ಯಾರಾದ್ರೂ ಹೇಳ್ತಾರೆ ಎನ್ನುತ್ತಿದ್ದಾರೆ. ವಯೋವೃದ್ಧ ದೇವೇಗೌಡ್ರು, ರಾಜಕೀಯ ಭೀಷ್ಮರಾಗಿದ್ದಾರೆ. ನಾನು ಮತ್ತೆ ಎದ್ದು ನಿಂತಿದ್ದೇನೆ, ಅಂತ ಗುಡುಗಿದ್ದಾರೆ. ಹಾಗಾದ್ರೆ ಗೌಡರು ರಣವೀಳ್ಯ ಕೊಟ್ಟದ್ದು ಯಾರಿಗೆ ಗೊತ್ತಾ? ದೇವೇಗೌಡರ ಜೊತೆ ಜೊತೆಗೇ ರಾಜಕಾರಣ ಮಾಡ್ತಾ ಬಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರಾಜಕೀಯವಾಗಿ ತೆರೆಮರೆಗೆ ಸರಿದು ವರ್ಷಗಳೇ ಕಳೆದಿವೆ. ಆದರೆ ಒಬ್ಬ ದೇವೇಗೌಡ್ರು ಮಾತ್ರ ಇವತ್ತಿಗೂ ರಾಜಕೀಯ ಪಟ್ಟುಗಳನ್ನು ಹಾಕ್ತಾನೇ ಇದ್ದಾರೆ. ಅದು ಮಣ್ಣಿನ ಮಗನ ಸ್ಪೆಷಾಲಿಟಿ.

Related Video