Party Rounds: ಸೋಮವಾರ ದೆಹಲಿಗೆ ದೇವೇಗೌಡ, ಮೈತ್ರಿ ಮಾತುಕತೆ ಸಾಧ್ಯತೆ
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಮೈತ್ರಿ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು(ಜು.20): 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ. ಹೌದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ರ್ಚೆ ನಡೆಯುತ್ತಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆಗಳು ಕೂಡ ಮುಗಿದಿವೆ. ಕ್ಷೇತ್ರ ಹಂಚಿಕೆ ಬಾಕಿ ಇದೆ ಅನ್ನೋತನಕ ಸುದ್ದಿ ಬಂದಿದೆ. ಆದರೆ, ಜು.18 ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ಗೆ ಆಹ್ವಾನ ಇರಲಿಲ್ಲ. ಇದು ಮತ್ತಷ್ಟು ಆಶ್ಚರ್ಯ ತಂದಿತ್ತು. ಸದ್ಯಕ್ಕೆ ಮಾತುಕತೆಯನ್ನ ನಿಲ್ಲಿಸಲಾಗಿದೆ ಅಂತ ನಂತರ ತಿಳಿದು ಬಂದಿತ್ತು. ಇದೀಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಮೈತ್ರಿ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ.
Party Rounds: ಅಮಾನತು ವಿರುದ್ಧ ಬಿಜೆಪಿ ಜೆಡಿಎಸ್ ಅಸ್ತ್ರ, ರಾಜ್ಯಪಾಲರಿಗೆ ದೂರು