
BJP Janaspandana: ಮಾಜಿ ಶಾಸಕ ಎಂ. ಡಿ ಲಕ್ಷ್ಮೀ ನಾರಾಯಣ್ ಬಿಜೆಪಿ ಸೇರ್ಪಡೆ
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅನಿಲ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಬೆಂಗಳೂರು (ಸೆ.10): ಅಧಿಕೃತವಾಗಿ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನು ಜೆಡಿಎಸ್ ಕೋಟೆ ಬಿಟ್ಟು ಮಾಜಿ ಐಪಿಎಸ್ ಅಧಿಕಾರಿ ಅನಿಲ್ ಕುಮಾರ್ ಅವರು ಕೂಡ ಕೇಸರಿ ಪಾಳಯ ಸೇರಿದ್ದು, ರಾಮನಗರ ಮತ್ತು ಕೋಲಾರದ ಸ್ಥಳೀಯ ನಾಯಕರು ಕೂಡ ಬಜೆಪಿಗೆ ಸೇರುತ್ತಿದ್ದು, ಹೀಗಾಗಿ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಬಲ ಬಂದಂತಾಗಿದೆ. ಕಾಂಗ್ರೆಸ್ ಪಕ್ಷದ ಓಬಿಸಿ ವಿಭಾಗದ ಅಧ್ಯಕ್ಷರೂ ಆಗಿರುವ ಎಂ ಡಿ ಲಕ್ಷ್ಮಿ ನಾರಾಯಣ ವಿಧಾನ ಪರಿಷತ್ಗೆ ತಮ್ಮನ್ನು ಪರಿಗಣಿಸದೆ ಇರುವುದರಿಂದ ಸಾಕಷ್ಟು ಬೇಸರಗೊಂಡು ಪಕ್ಷದ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಬಹಿರಂಗವಾಗಿ ನಾಯಕರ ವಿರುದ್ಧ ಆಕ್ರೋಶ ಸಹ ವ್ಯಕ್ತಪಡಿಸಿದ್ದರು.