Asianet Suvarna News Asianet Suvarna News

FIR ದಾಖಲಿಸಿದ್ದಕ್ಕೆ ಅಶ್ವತ್ಥ್‌ನಾರಾಯಣ ಆಕ್ರೋಶ

ಸಿದ್ದರಾಮಯ್ಯರನ್ನ ಹೊಡೆದಾಕಿ ಅಂತ ಅಶ್ವತ್ಥ್‌ನಾರಾಯಣ್‌ ಹೇಳಿದ್ದರು. ನನ್ನ ಹೇಳಿಕೆಯ ಬಗ್ಗೆ ಸಿದ್ದರಾಮಯ್ಯಗೆ ವಿಷಾಧ ವ್ಯಕ್ತಪಡಿಸಿದ್ದೆ, ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸುವೆ, ಇದಕ್ಕೆಲ್ಲಾ ನಾನು ಹೆದರುವ, ಭಯ ಪಡುವ ಮಾತೇ ಇಲ್ಲ: ಸಿ.ಎನ್‌. ಅಶ್ವತ್ಥ್‌ನಾರಾಯಣ 

ಬೆಂಗಳೂರು(ಮೇ.25): ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಮಾಜಿ. ಸಿ.ಎನ್‌. ಅಶ್ವತ್ಥ್‌ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ ನಡೆಯುತ್ತಿದೆ. ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯರನ್ನ ಹೊಡೆದಾಕಿ ಅಂತ ಅಶ್ವತ್ಥ್‌ನಾರಾಯಣ್‌ ಹೇಳಿದ್ದರು. ನನ್ನ ಹೇಳಿಕೆಯ ಬಗ್ಗೆ ಸಿದ್ದರಾಮಯ್ಯಗೆ ವಿಷಾಧ ವ್ಯಕ್ತಪಡಿಸಿದ್ದೆ, ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸುವೆ, ಇದಕ್ಕೆಲ್ಲಾ ನಾನು ಹೆದರುವ, ಭಯ ಪಡುವ ಮಾತೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್‌ಡಿಕೆ ಹೊಸ ಬಾಂಬ್!

Video Top Stories