ಲೀಗಲ್ ನೋಟಿಸ್ ಕೊಡ್ಲಿ ಅಂತ ಕಾಯ್ತಿದ್ದೆ: ಅಚ್ಚರಿಗೆ ಕಾರಣವಾಯ್ತು ಸಿದ್ದರಾಮಯ್ಯ ಮಾತು..!

ಬಿಜೆಪಿಯವರ ಲೀಗಲ್ ನೋಟಿಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದು, ಅದನ್ನು ಅವರ ಬಾಯಿಂದಲೇ ಕೇಳಿ.

First Published Jul 31, 2020, 3:59 PM IST | Last Updated Jul 31, 2020, 4:08 PM IST

ಬೆಂಗಳೂರು, (ಜುಲೈ.31): ಕೋವಿಡ್ 19 ನಿಯಂತ್ರಣಕ್ಕಾಗಿ ಖರೀದಿಸಲಾಗಿರುವ ಉಪಕರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಾರ್ವಜನಿಕ ತಿಳಿವಳಿಕೆ ಪತ್ರವನ್ನು (ಲೀಗಲ್ ನೋಟೀಸ್)ನೀಡಿದ್ದು 15 ದಿನದಲ್ಲಿ ಉತ್ತರ ನೀಡಬೇಕು ಹಾಗೂ ಬಹಿರಂಗವಾಗಿ ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ: ಸಿದ್ದರಾಮಯ್ಯ, ಡಿಕೆಶಿಗೆ ಲೀಗಲ್ ನೋಟಿಸ್

ಇನ್ನು ಈ ಲೀಗಲ್ ನೋಟಿಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದು, ಅದನ್ನು ಅವರ ಬಾಯಿಂದಲೇ ಕೇಳಿ.