Third Front: ಮೂರನೇ ಶಕ್ತಿ ಇಂದು ಅತ್ಯಗತ್ಯ, ದಸರಾ ವೇಳೆ ಉತ್ತಮ ನಿರ್ಧಾರ: ಕುಮಾರಸ್ವಾಮಿ

*  ಕಾಂಗ್ರೆಸ್‌ ಶಾಸಕರ ಸಭೆ ಕರೆದ ಸಿದ್ದರಾಮಯ್ಯ
*  ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ 
*  ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ದ್ರೋಹ: ಕಾರಜೋಳ
 

First Published May 27, 2022, 9:26 AM IST | Last Updated May 27, 2022, 9:26 AM IST

ಬೆಂಗಳೂರು(ಮೇ.27): ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನ ತೆಲಂಗಾಣ ಸಿಎಂ ಕೆಸಿಆರ್‌ ಭೇಟಿ ಮಾಡಿದ್ದಾರೆ. ತೃತೀಯ ರಂಗ ರಚನೆ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. 
* ದೇಶಕ್ಕೆ ಮೂರನೇ ಶಕ್ತಿ ಅನಿವಾರ್ಯವಾಗಿದ್ದು ದಸರಾ ವೇಳೆಗೆ ಉತ್ತಮ ನಿರ್ಧಾರ ಹೊರಬೀಳುತ್ತೆ, ದೇಶದ ಇತಿಹಾಸಕ್ಕೆ ಇದು ಫೌಂಡೇಶನ್‌ ಹಾಕಲಿದೆ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
* ಕಾಂಗ್ರೆಸ್‌ ಶಾಸಕರ ಸಭೆ ಕರೆದ ಸಿದ್ದರಾಮಯ್ಯ, ರಾಜ್ಯಸಭೆ ಚುನಾವಣೆ ಸಂಬಂಧ ಸಭೆ ಕರೆಯಲಾಗಿದೆ.

News Hour: ಟಿಪ್ಪು ಸಹಚರನಿಂದ ಮಳಲಿ ಮಠ ನಾಶ? ನೀಲಕಂಠ ವೈಭವ ಪುಸ್ತಕದಲ್ಲಿರುವ ಸತ್ಯವೇನು?

* ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದು, ನರೇಂದ್ರ ಮೋಳದಿ ರೈತರಿಗೆ ಕೊಟ್ಟ ಯಾವ ಭರವಸೆನೂ ಈಡೇರಿಸಿಲ್ಲ ಅಂತ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
* ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ದ್ರೋಹವಾಗಿದೆ ಅಂತ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್‌ ವಿರುದ್ಧ ಕೆಂಡ ಕಾರಿದ್ದಾರೆ.  

Must See