News Hour: ಟಿಪ್ಪು ಸಹಚರನಿಂದ ಮಳಲಿ ಮಠ ನಾಶ? ನೀಲಕಂಠ ವೈಭವ ಪುಸ್ತಕದಲ್ಲಿರುವ ಸತ್ಯವೇನು?
ಟಿಪ್ಪು ಸಹಚರ ಶೇಖ್ ಆಲಿ ನವಾಬ ಮಳಲಿ ಮಠದ ಮೇಲೂ ದಾಳಿ ನಡೆಸಿದ್ದನು ಎನ್ನುವ ವಿಚಾರ 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ
ಮಂಗಳೂರು (ಮೇ 26): ಮಳಲಿ ಮಸೀದಿಯಲ್ಲಿ (Malali Masjid) ಗೋಚರವಾಗಿರುವುದು ಮಠವೋ ಅಥವಾ ದೇವಸ್ಥಾನವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮುಂದುವರಿಯುತ್ತಿರುವಂತೆಯೇ ಟಿಪ್ಪು ಸುಲ್ತಾನ್ ಸಹಚರನ ದಾಳಿಯಿಂದ ಮಳಲಿ ಮಠ ನಾಶವಾದ ಬಗ್ಗೆ ಜಂಗಮ ಮಠದ ಪುಸ್ತಕದಲ್ಲಿ ಸ್ಫೋಟಕ ಅಂಶವೊಂದು ಬಹಿರಂಗವಾಗಿದೆ.
ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ದಾಳಿ ನಡೆಸಿದ್ದ. ಟಿಪ್ಪು ಸಹಚರ ಶೇಖ್ ಆಲಿ ನವಾಬನಿಂದ ಮಳಲಿ ಮಠದ ಮೇಲೂ ದಾಳಿ ನಡೆಸಿದ್ದನು ಎನ್ನುವ ವಿಚಾರ 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಟಿಪ್ಪು ಸಹಚರನ ದಾಳಿಯ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪುಸ್ತಕ ಗುರುಪುರದ ಜಂಗಮ ಲಿಂಗಾಯತ ಮಠದಿಂದ ಪ್ರಕಟಗೊಂಡಿದೆ.ಕೆಳದಿ ಅರಸರ ಬಳಿಕ ಮಳಲಿ ಪ್ರಾಂತ್ಯದಲ್ಲಿ ಟಿಪ್ಪು ಆಳ್ವಿಕೆ ನಡೆಸಿದ್ದ. ಈ ವೇಳೆ ಟಿಪ್ಪು ಸಹಚರನಿಂದ ಲಿಂಗಾಯತ ಜಂಗಮ ಮಠದ ಹಲವು ಮಠಗಳ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಯ್ತಾ ಮಳಲಿ ಮಠ?: ಗುರುಪುರ ಮಠಕ್ಕೂ ಮಸೀದಿ ವಾಸ್ತುಶಿಲ್ಪಕ್ಕೂ ಸಾಮ್ಯತೆ!
ಮಂಗಳೂರಿನಲ್ಲಿ 48 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿವೆ. ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ನವೀಕರಣ ವೇಳೆ ಮಳಲಿ ಮಸೀದಿಯಲ್ಲಿ ಪತ್ತೆಯಾಗಿದ್ದು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ ಶೈವ ಮಠ ಎಂಬ ಚರ್ಚೆಗೆ ಗುರುಪುರದ ಜಂಗಮ ಲಿಂಗಾಯತ ಮಠದ ರುದ್ರಮುನಿ ಸ್ವಾಮೀಜಿ ಈ ಸ್ಪಷ್ಟನೆ ನೀಡುತ್ತಿದ್ದಾರೆ.