ಚಿಕ್ಕಮಗಳೂರಿನ ಮಹಾನುಭಾವ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ: ಹೆಚ್.ಡಿ.ಕೆ ವಾಗ್ದಾಳಿ
ಶಾಸಕ ಸಿ.ಟಿ ರವಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಕಿಚನ್ ಕ್ಯಾಬಿನೆಟ್ ಎಂದಿದ್ದ ಸಿ.ಟಿ ರವಿಗೆ ಟಾಂಗ್ ನೀಡಿದ್ದಾರೆ.
ಹಳೆ ಅಂಬಾಸಿಡರ್'ಗೆ ವರ್ಕೌಟ್ ಆಗಲ್ವಂತೆ, ರೇಂಜ್ ರೋವರ್ ಜಾಗ್ವಾರ್ ಆಗಬೇಕಂತೆ ಎಂದಿದ್ದ ಸಿ.ಟಿ ರವಿಗೆ ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ. ಚಿಕ್ಕಮಗಳೂರಿನ ಮಹಾನುಭಾವ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ ಎಂದರು. ಕೆಎಂಎಫ್ ಅಭಿವೃದ್ಧಿಗೆ ರೇವಣ್ಣರ ಕೊಡುಗೆ ಇದೆ. 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೆ. ಹಾಸನದಲ್ಲಿ ಇಂದಿನಿಂದ ಹೆಚ್.ಡಿ ರೇವಣ್ಣ, ಭವಾನಿ, ಪ್ರಜ್ವಲ್ ಪ್ರಚಾರ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ರೇವಣ್ಣ ಕುಟುಂಬ ಪ್ರಚಾರ ಶುರು ಮಾಡಿದೆ. ಅಭ್ಯರ್ಥಿ ಘೋಷಣೆ ಬಳಿಕ ಅಭ್ಯರ್ಥಿ ಪರ ಎಲ್ಲರೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.