Karnataka Politics ಹೊರಗಡೆ ಹಿಜಾಬ್ ಕಿಚ್ಚು, ಸದನದೊಳಗೆ ಧ್ವಜ ಕದನ

ಅತ್ತ ಹೊರಗೆ ಹಿಜಾಬ್ ಕಿಚ್ಚು ಜೋರಾಗಿದ್ರೆ, ಇತ್ತ ಸದನದೊಳಗೆ ಸದನದೊಳಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಧ್ವಜ ಕದನ ತಾರಕಕ್ಕೇರಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.17): ಅತ್ತ ಹೊರಗೆ ಹಿಜಾಬ್ ಕಿಚ್ಚು ಜೋರಾಗಿದ್ರೆ, ಇತ್ತ ಸದನದೊಳಗೆ ಸದನದೊಳಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಧ್ವಜ ಕದನ ತಾರಕಕ್ಕೇರಿದೆ. ರಾಷ್ಟ್ರ ಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ‌ಅಹೋರಾತ್ರಿ ಧರಣಿ ನಡೆಸಲಿದೆ.

ವಿಧಾನಸಭೆಯಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ, ಇದಕ್ಕೆ ಸಿಎಂ ಹೇಳಿದ್ದಿಷ್ಟು

ರಾಷ್ಟ್ರಧ್ವಜ ಬದಲಾವಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿರುವ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಘೋಷಿಸಿದ್ದಾರೆ.

ಇದಕ್ಕೂ ಮೊದಲು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಲುವಳಿ ಸೂಚನೆ ಸಂಬಂಧ ಎರಡೂ ಪಕ್ಷದ ಶಾಸಕರ ಸಂಧಾನ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಯು.ಟಿ.ಖಾದರ್, ಬಿ.ಎಂ.ಬಿ.ಎಂ.ಪಾಟೀಲ್​ ಹಾಜರುಪಡಿಸಿದರು.ಆದ್ರೆ, ಸಂಧಾನ ಸಭೆ ವಿಫಲವಾಗಿದ್ದು, ಈಶ್ವರಪ್ಪ ರಾಜೀನಾಮೆ ನೀಡುವವರೆಗೆ ಧರಣಿ ಮಾಡುವುದಾಗಿ ಕಾಂಗ್ರೆಸ್ ಪಟ್ಟು ಹಿಡಿದಿದೆ.ಇನ್ನು ಇದಕ್ಕೆ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

Related Video