ಪಂಚ ರಾಜ್ಯದಲ್ಲಿ ಸಿಎಂ ಆಯ್ಕೆ ಕಸರತ್ತು, ತೆಲಂಗಾಣದಲ್ಲಿ ಕಗ್ಗಂಟು!

ಛತ್ತಿಸಘಡದಲ್ಲಿ ಯಾರಿಗೆ ಸಿಎಂ, ಎಸ್‌ಟಿ ಅಥವಾ ಒಬಿಸಿ ನಾಯಕನ ಮೇಲೆ ಬಿಜೆಪಿ ಒಲವು, 1.5 ಕೋಟಿ ರೂಪಾಯಿ ಕಾರಿನಡಿಗೆ ಬಿದ್ದು ಸಾಯಬೇಕಾ?ಭವಾನಿ ರೇವಣ್ಣ ದರ್ಪದ ಮಾತು ವೈರಲ್, ತೆಲಂಗಾಣ ಸಿಎಂ ಆಯ್ಕೆ ಕಸರತ್ತು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಗೆದ್ದ ಪಕ್ಷಗಳು ಸಿಎಂ ಆಯ್ಕೆ ಕಸರತ್ತು ಶುರುಮಾಡಿದೆ. ಆದರೆ ತೆಲಂಗಾಣದಲ್ಲಿ ಸಂಕಷ್ಟ ಆರಂಭಗೊಂಡಿದೆ. ಇದುವರೆಗೆ ರೇವಂತ್ ರೆಡ್ಡಿ ಮುಂದಿನ ಸಿಎಂ ಬಹುತೇಕ ಪಕ್ಕಾ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಇದೀಗ ಸಿಎಂ ರೇಸ್‌ನಲ್ಲಿ 13 ಹೆಸರುಗಳು ಕೇಳಿಬಂದಿದೆ.ಛತ್ತೀಸಘಡದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಇದೀಗ ಸಿಎಂ ಆಯ್ಕೆ ಕಸರತ್ತು ಆರಂಭಿಸಿದೆ. ಮೂರು ಬಾರಿ ಸಿಎಂ ಆಗಿರುವ ರಮಣ್ ಸಿಂಗ್ ಸೇರಿದಂತೆ ಪ್ರಮುಖ ನಾಲ್ವರ ಹೆಸರು ಕೇಳಿಬರುತ್ತಿದೆ.

Related Video