Asianet Suvarna News Asianet Suvarna News

RR ನಗರ ಉಪಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಗ್ರೀನ್ ಸಿಗ್ನಲ್; ಮುನಿರತ್ನ ರಿಯಾಕ್ಷನ್ ಇದು!

ಆರ್‌ ಆರ್‌ ನಗರ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತುಳಸಿ ಮುನಿರಾಜು ಅರ್ಜಿಯನ್ನು ವಜಾ ಮಾಡಿದೆ. ಸುಪ್ರೀಂ ತೀರ್ಪಿನಿಂದ ಮುನಿರತ್ನ ಉಪಚುನಾವಣಾ ಹಾದಿ ಇನ್ನಷ್ಟು ಸುಗಮವಾಗಿದೆ. 

ಬೆಂಗಳೂರು (ಅ. 13): ಆರ್‌ ಆರ್‌ ನಗರ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತುಳಸಿ ಮುನಿರಾಜು ಅರ್ಜಿಯನ್ನು ವಜಾ ಮಾಡಿದೆ. ಸುಪ್ರೀಂ ತೀರ್ಪಿನಿಂದ ಮುನಿರತ್ನ ಉಪಚುನಾವಣಾ ಹಾದಿ ಇನ್ನಷ್ಟು ಸುಗಮವಾಗಿದೆ. 

ಜಾಕಿರ್‌, ಸಂಪತ್‌ ರಾಜ್‌ನನ್ನು ಬಂಧಿಸಿ; ಅಖಂಡ ಬೆಂಬಲಿಗರಿಂದ ಪ್ರತಿಭಟನೆ

ಈ ಬಗ್ಗೆ ಮುನಿರತ್ನ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿ, ಬಿಜೆಪಿ ಟಿಕೆಟ್ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಒಂದು ವೇಳೆ ಮುನಿರಾಜು ಗೌಡಗೆ ಕೊಟ್ಟರೂ ಗೌರವಿಸುತ್ತೇನೆ. ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತೇವೆ. ನನಗೆ ಟಿಕೆಟ್ ಕೊಡದಿದ್ರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಿಲ್ಲ. ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ' ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.