ಬಿಜೆಪಿಯಲ್ಲಿ ಬಂಡಾಯದ ಬೆಂಕಿ: ಸಿಎಂ ಬಸವರಾಜ್ ಬೊಮ್ಮಾಯಿ ಫಸ್ಟ್ ರಿಯಾಕ್ಷನ್
ಬಹುತೇಕವಾಗಿ ಎಲ್ಲ ಕಡೆ, ಚುನಾವಣೆ ಅಪೇಕ್ಷಿತರು ಕೆಲವರು ರಾಜಿನಾಮೆ ಕೊಟ್ಟಿದ್ದಾರೆ. ಬಹುತೇಕ ಕಡೆ ಚರ್ಚೆ ಮಾಡಿದದು, ಬಂಡಾಯ ಶಮನ ಆಗುತ್ತಿದೆ. ಎಲ್ಲವೂ ಶಮನ ಆಗುತ್ತದೆ.
ಬೆಂಗಳೂರು (ಏ.13): ನಾನು ಎಲ್ಲ ನಾಯಕರ ಜೊತೆಗೆ ಮಾತನಾಡಿದ್ದೇ, ಬಹುತೇಕವಾಗಿ ಎಲ್ಲ ಕಡೆ, ಚುನಾವಣೆ ಅಪೇಕ್ಷಿತರು ಕೆಲವರು ರಾಜಿನಾಮೆ ಕೊಟ್ಟಿದ್ದಾರೆ. ಬಹುತೇಕ ಕಡೆ ಚರ್ಚೆ ಮಾಡಿದದು, ಬಂಡಾಯ ಶಮನ ಆಗುತ್ತಿದೆ. ಎಲ್ಲವೂ ಶಮನ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್‌ನಲ್ಲಿ 65 ಜನರಿಗೆ ಟಿಕೆಟ್ ಕೊಡಲು ಅರ್ಹರೇ ಇರಿಲಿಲ್ಲ. ಆದ್ದರಿಂದ 160 ಟಿಕೆಟ್ ಘೋಷಣೆ ಮಾಡಿ ಸುಮ್ಮನೆ ನಿಲ್ಲಿಸಿಬಿಟ್ಟಿದ್ದಾರೆ. ಆರಂಭಿಕ ಶೂರತ್ವ ತೋರಿಸಿದ್ದಾರೆ. ಯಾವ ಪಕ್ಷದಿಂದ ಬಂಡಾಯ ಎದ್ದು ಬರುತ್ತಾರೋ ಅವರನ್ನು ಆಮದು ಮಾಡಿಕೊಳ್ಳುವ ರಾಜನೀತಿಯನ್ನು ಪಾಲಿಸಲು ಮುಂದಾಗಿದ್ದಾರೆ. ಅಂದರೆ ಒಟ್ಟಾರೆಯಾಗಿ ಅವರ ಬಳಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳೇ ಇಲ್ಲವೆಂದಂತೆ ಆಗಿದೆ. ಇನ್ನು ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ದೂರದ ಮಾತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.