ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ

ವಿಜಯಪುರದಲ್ಲಿ ಲೋಕಸಭೆ ಫೈಟ್ ಜೋರಾಗಿದೆ. ಬಿಜೆಪಿ,ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ಭಾಗವಾಗಿಯೇ ಜೆಡಿಎಸ್ ನಾಯಕರು ಅದ್ಧೂರಿ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಹುರಿದುಂಬಿಸಿದ್ರೆ..ಇತ್ತ ಹಾಲಿ ಸಂಸದರು ಸೇರಿ ಬಿಜೆಪಿ ನಾಯಕರಿಗೆ ಢವಢವ ಶುರುವಾಗಿದೆ.

First Published Oct 12, 2023, 10:40 AM IST | Last Updated Oct 12, 2023, 10:40 AM IST

ಲೋಕಸಭಾ ಎಲೆಕ್ಷನ್‌ಗೆ ಕೆಲವೇ ತಿಂಗಳು ಬಾಕಿ ಇದೆ. ಈಗಾಗಲೇ ಬಿಜೆಪಿ(BJP), ಜೆಡಿಎಸ್(JDS) ದೋಸ್ತಿನೂ ಆಗೋಗಿದೆ. ಇದರ ಭಾಗವಾಗಿ ವಿಜಯಪುರದಲ್ಲಿ(Vijayapura) ಪುನರ್‌ಚೇತನ ಕಾರ್ಯಕ್ರಮದ ಮೂಲಕ  ಜೆಡಿಎಸ್ ನಾಯಕರು ಶಕ್ತಿಪ್ರದರ್ಶನ ಮಾಡಿದ್ದಾರೆ. ನಗರದ ಸಿದ್ದೇಶ್ವರ ದೇಗುಲದಿಂದ ರಾಣಿಚೆನ್ನಮ್ಮ ಹಾಲ್‌ವರೆಗೂ ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆ ಮಾಡಿ ಬೃಹತ್ ಸಮಾವೇಶ ನಡೆಸಿದ್ರು. ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕ ವೈಎಸ್‌ವಿ ದತ್ತ, ಬಂಡೆಪ್ಪ ಕಾಶಂಪೂರ್ ಸೇರಿ ಹಲವರು ಭಾಗಿಯಾಗಿದ್ರು. ಈ ವೇಳೆ ಜೆಡಿಎಸ್ ನಾಯಕರು ಲೋಕಸಭೆ ಎಲೆಕ್ಷನ್‌ಗೆ ಸಿದ್ಧರಾಗಿ ಅಂತಾ ಕಾರ್ಯಕರ್ತರ ಹುರಿದುಂಬಿಸೋ ಜೊತೆಗೆ ವಿಜಯಪುರದಲ್ಲಿ ಯಾರಿಗೆ ಟಿಕೆಟ್(Ticket) ಕೊಟ್ರು ಕೆಲಸ ಮಾಡುವಂತೆ ಮನವಿ ಮಾಡಿದ್ರು. ಲೋಕಸಭೆ ಎಲೆಕ್ಷನ್‌ ಹತ್ತಿರ ಇರುವಾಗ್ಲೆ ಜೆಡಿಎಸ್ ಶಕ್ತಿಪ್ರದರ್ಶನ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲೂ ಹಾಲಿ ಸಂಸದ ಜಿಗಜಿಣಗಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ರೆ..ಇತ್ತ ಮಾಜಿ ಇನ್ಸ್ಪೆಕ್ಟರ್‌ ಮಹೇಂದ್ರ ನಾಯಕ್‌, ವೈದ್ಯ ಬಾಬುರಾಜೇಂದ್ರ ನಾಯಕ್‌ ಸಹ ಬಿಜೆಪಿ ಟಿಕೆಟ್‌ ರೇಸ್ನಲ್ಲಿದ್ದಾರೆ. ಇದರ ಮಧ್ಯೆ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್ ನಾವೂ ಟಿಕೆಟ್ ಕೇಳ್ತೀವಿ ಎನ್ನುವ ಮೂಲಕ ಕದನ ಕಣ ಕಿಕ್ಕೇರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !