ಬಿಜೆಪಿ ಅಜೆಂಡಾ ಭಾವನೆ, ಕಾಂಗ್ರೆಸ್‌ ಅಜೆಂಡಾ ಬದುಕು: ಕಟೀಲ್‌ ವಿರುದ್ಧ ಡಿಕೆಶಿ ಕಿಡಿ

ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಜೆಂಡಾ ಭಾವನೆ, ಬದುಕು ಮತ್ತು ಅಭಿವೃದ್ಧಿ ಅಲ್ಲ. ಆದರೆ, ಕಾಂಗ್ರೆಸ್‌ ಅಜೆಂಡಾ ಜನರ ಬದಕನ್ನು ಕಟ್ಟುವುದು ಆಗಿದೆ. ಬೆಲೆ ಏರಿಕೆಯಿಂದ ಜನರು ತತ್ತರ ಆಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.04): ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಜೆಂಡಾ ಭಾವನೆ, ಬದುಕು ಮತ್ತು ಅಭಿವೃದ್ಧಿ ಅಲ್ಲ. ಆದರೆ, ಕಾಂಗ್ರೆಸ್‌ ಅಜೆಂಡಾ ಜನರ ಬದಕನ್ನು ಕಟ್ಟುವುದು ಆಗಿದೆ. ಬೆಲೆ ಏರಿಕೆಯಿಂದ ಜನರು ತತ್ತರ ಆಗಿದ್ದಾರೆ. ನಾವು ಅವರಿಗೆ ಧ್ವನಿ ಕೊಡಬೇಕು. ಮನಸ್ಸು ಕೆಡಸುವುದು ಅಲ್ಲ. ಕೇವಲ ಹಿಂದೂತ್ವ, ಲವ್ ಜಿಹಾದ್ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಇನ್ನು ಸಿಎಂ ಬೊಮ್ಮಾಯಿ ಅವರನ್ನ ನಾಯಿಮರಿಗೆ ಹೋಲಿಸಿ ಸಿದ್ದರಾಮಯ್ಯ ಅವರು ಮಾತನಾಡಿರುವುದಿಲ್ಲ. ಏನ್ ಮಾತನಾಡಿದ್ದಾರೆ ಅಂತ ನಾನು ನೋಡುತ್ತೇನೆ. ನಮ್ಮ ಮನೆಯಲ್ಲೂ ನಾಯಿ ಇದೆ. ನಮಗೂ ಬಹಳ ಪ್ರಿಯವಾದದ್ದು. ನಾಯಿ ಕಳ್ಳರಿಂದ ಮನೆ ರಕ್ಷಣೆ ಮಾಡತ್ತದೆ. ನಾಯಿ ನಾರಾಯಣ ಇದ್ದಂತೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Related Video