ಮೋದಿಯನ್ನು ರಾಜಕೀಯವಾಗಿ ಹಣಿಯಲು ಎದುರಾಳಿಗಳಿಂದ ಶುರುವಾಗಿದೆ ಸುಳ್ಳಿನ ಯುದ್ಧ..!
ಪ್ರಧಾನಿ ಮೋದಿ ಎಂದರೆ ಸೋಲಿಲ್ಲದ ಸರದಾರ. ರಾಜಕೀಯವಾಗಿ ಹೇಳುವುದಾದರೆ ಮೋದಿಯನ್ನು ಎದುರಿಸಲು ಎದುರಾಳಿ ಪಡೆಯಲ್ಲಿ ಸಮರ್ಥ ನಾಯಕರೇ ಇಲ್ಲ. ಇಡುವ ಪ್ರತಿಯೊಂದು ಹೆಜ್ಜೆಯೂ ಮುಂದಾಲೋಚನೆಯಿಂದ ಕೂಡಿರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಹೆಸರು ಕೇಳಿದರೆ ಸಾಕು ಅದೊಂದು ಶಕ್ತಿ.
ಬೆಂಗಳೂರು (ಸೆ. 07): ಪ್ರಧಾನಿ ಮೋದಿ ಎಂದರೆ ಸೋಲಿಲ್ಲದ ಸರದಾರ. ರಾಜಕೀಯವಾಗಿ ಹೇಳುವುದಾದರೆ ಮೋದಿಯನ್ನು ಎದುರಿಸಲು ಎದುರಾಳಿ ಪಡೆಯಲ್ಲಿ ಸಮರ್ಥ ನಾಯಕರೇ ಇಲ್ಲ. ಇಡುವ ಪ್ರತಿಯೊಂದು ಹೆಜ್ಜೆಯೂ ಮುಂದಾಲೋಚನೆಯಿಂದ ಕೂಡಿರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಹೆಸರು ಕೇಳಿದರೆ ಸಾಕು ಅದೊಂದು ಶಕ್ತಿ.
ಸಾಲು ಸಾಲು ಹಗರಣಗಳು, ಕೋಟಿ ಕೋಟಿ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದ ಕಾಂಗ್ರೆಸ್‌ಗೆ ನಮೋ 2014 ರಲ್ಲಿ ಕೊಟ್ಟ ಸ್ಟ್ರೋಕ್‌ನಿಂದ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. 2019 ರ ಅವಧಿಗೆ ಹೇಗಾದರೂ ಮಾಡಿ ಮೋದಿಯನ್ನು ಕೆಳಗಿಳಿಸಲೇಬೇಕು ಅಂತ ವಿರೋಧ ಪಕ್ಷಗಳು ಶತಾಯಗತಾಯ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ರಾಜಕೀಯವಾಗಿ ಮೋದಿಯನ್ನು ಎದುರಿಸುವುದು ಕಷ್ಟಸಾಧ್ಯ. ಹಾಗಾಗಿ ಅವರ ತೇಜೋವಧೆಗೆ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಫೋಟೋ ಹಾಕಿ, ಸುಳ್ಳುಸುದ್ದಿಗಳನ್ನು ಹಾಕಿ ವೈರಲ್ ಮಾಡುತ್ತಿದ್ದಾರೆ. ಇದರಲ್ಲಿನ ಸತ್ಯಾಸತ್ಯತೆ ಎಷ್ಟು? ಯಾಕಾಗಿ ಈ ಕೆಲಸ ಮಾಡುತ್ತಿದ್ದಾರೆ? ಯಾರು ಮಾಡುತ್ತಿದ್ದಾರೆ? ಇಲ್ಲಿದೆ ಒಂದು ರಿಪೋರ್ಟ್..!