ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಪ್ರತಿಮೆಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದರೊಂದಿಗೆ ‘6 ವರ್ಷಗಳ ಕಾಲ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಈಗ ಅವರಿಗೇ ನೀವು ತಲೆಬಾಗಿ ನಮಸ್ಕರಿಸುತ್ತಿದ್ದೀರೆಂದರೆ ಅವರ ಸಿದ್ಧಾಂತ ಮತ್ತು ಆಲೋಚನೆ ನಿಮಗಿಂತ ಎತ್ತರದ ಸ್ಥಾನದಲ್ಲಿದೆ ಎಂದು ಅರ್ಥ ಮಾಡಿಕೊಳ್ಳಿ’ ಎಂದು ಬರೆಯಲಾಗಿದೆ. ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಈ ಫೋಟೋ ಭಾರಿ ವೈರಲ್‌ ಆಗುತ್ತಿದೆ.

 

ಆದರೆ ಪ್ರಧಾನಿ ಮೋದಿ ಮಾಜಿ ಪ್ರಧಾನಿ ನೆಹರು ಪ್ರತಿಮೆಗೆ ನಮಸ್ಕರಿಸಿದ್ದು ನಿಜವೇ ಎಂದು ಪರಿಶೀಲಿಸಿದಾಗ ಹಳೆಯ ಫೋಟೋವನ್ನೇ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಈ ರೀತಿಯ ಸುಳ್ಳುಸುದ್ದಿ ಸೃಷ್ಟಿಸಲಾಗಿದೆ ಎಂಬುದು ಖಚಿತವಾಗಿದೆ.

Fact Check | ಪಾಕ್‌ಗೆ ರಷ್ಯಾ ಕೋವಿಡ್ ಲಸಿಕೆ ಗಿಫ್ಟ್‌!

ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಆಗಸ್ಟ್‌ 8, 2020ರಂದು ಮೋದಿ ತಮ್ಮ ಅಧಿಕೃತ ಟ್ವೀಟರ್‌ ಖಾತೆಯಿಂದ ದೆಹಲಿಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮೋದಿ ನಮಸ್ಕರಿಸುತ್ತಿರುವ ಫೋಟೋವೂ ಇದೆ. ಇದೇ ಫೋಟೋವನ್ನು ಎಡಿಟ್‌ ಮಾಡಿ ಗಾಂಧಿ ಪ್ರತಿಮೆ ಜಾಗದಲ್ಲಿ ನೆಹರು ಪ್ರತಿಮೆ ಸೃಷ್ಟಿಸಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್