ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ, ತನಿಖೆಗೆ ಆದೇಶಿಸಿದ ಸಿಎಂ ಬೊಮ್ಮಾಯಿ!
ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಸಿದ್ದರಾಮಯ್ಯ ಪ್ರವಾಸದ ಭಾಗಗಳಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹಿಂದೂ ವಿರೋಧಿ ಹಣೆ ಪಟ್ಟಿ ಕಳಚಲು ಸಿದ್ದರಾಮಯ್ಯ ಟೆಂಪಲ್ ರನ್ ಮಾಡಿದ್ದಾರೆ. ಶೃಂಗೇರಿ ಶಾರಾದ ಪೀಠ, ರಂಭಾಪುರಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈ ವೇಳೆ ಆಡಿದ ಪಶ್ಚಾತ್ತಾಪದ ಮಾತು ಭಾರಿ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ. ಇಷ್ಟೇ ಅಲ್ಲ ಈ ಘಟನೆಯನ್ನು ಖಂಡಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಟೆಂಪಲ್ ರನ್ ಆರಂಭಿಸಿದ್ದಾರೆ. ಇಂದು ಶೃಂಗೇರಿ ಮಠ, ರಂಭಾಪುರಿ ಪೀಠ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಸಿದ್ದರಾಮಯ್ಯ ಸಂದರ್ಶಿಸಿದ್ದಾರೆ. ಈ ವೇಳೆ ರಂಭಾಪುರಿ ಮಠದಲ್ಲಿ ಧರ್ಮ ಒಡೆಯುವ ಯತ್ನ ಮಾಡಿದ್ದು ತಪ್ಪಾಗಿದೆ ಎಂದು ಪಶ್ಚಾತ್ಪಾ ಪಟ್ಟಿದ್ದಾರೆ. ಇದು ರಾಜಕೀಯ ಸಂಚಲನ ಸೃಷ್ಟಿಸಿದೆ. ಧರ್ಮ ಒಡೆಯುವ ಯಾವುದೇ ಉದ್ದೇಶ ನನಗೆ ಇರಲಿಲ್ಲ. ಯಾರದೋ ಮಾತಿನಿಂದ ತಪ್ಪಾಗಿದೆ. ಇನ್ಯಾವತ್ತೂ ಈ ರೀತಿಯ ಕೆಲಸಕ್ಕೆ ಕೈ ಹಾಕಲ್ಲ ಎಂದು ಸಿದ್ದರಾಮಯ್ಯ ರಂಭಾಪುರಿ ಮಠದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ವತಃ ರಂಭಾಪರಿ ಶ್ರೀಗಳು ಮಾಹಿತಿ ಬಹಿರಂಗಪಡಿಸಿದ್ದಾರೆ.