ಒಂದು ಖಾತೆ ಬಿಟ್ಟು 2 ಖಾತೆ ಪಡೆದ ಕಾರಜೋಳ; ಮುಂದುವರೆದ ಶ್ರೀರಾಮುಲು ಅಸಮಾಧಾನ

ಆರೋಗ್ಯ ಇಲಾಖೆ ಸಮನ್ವಯ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿರುವ ಸಿಎಂ, ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ವಹಿಸಿದ್ದಾರೆ. ಶ್ರೀ ರಾಮುಲುಗೆ ಸಮಾಜ ಕಲ್ಯಾಣ ಇಲಾಖೆ ನೀಡಲು ನಿರ್ಧರಿಸಿದ್ದಾರೆ. 
 

First Published Oct 12, 2020, 12:46 PM IST | Last Updated Oct 12, 2020, 12:46 PM IST

ಬೆಂಗಳೂರು (ಅ. 12): ಆರೋಗ್ಯ ಇಲಾಖೆ ಸಮನ್ವಯ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿರುವ ಸಿಎಂ, ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ವಹಿಸಿದ್ದಾರೆ. ಶ್ರೀ ರಾಮುಲುಗೆ ಸಮಾಜ ಕಲ್ಯಾಣ ಇಲಾಖೆ ನೀಡಲು ನಿರ್ಧರಿಸಿದ್ದಾರೆ.

ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು 

ಸಮಾಜ ಕಲ್ಯಾಣ ಖಾತೆಯನ್ನು ಡಿಸಿಎಂ ಗೋವಿಂದ ಕಾರಜೋಳ ಬಿಟ್ಟುಕೊಟ್ಟಿದ್ದಾರೆ. ಸಿಟಿ ರವಿ ರಾಜಿನಾಮೆ ನಂತರ ತೆರವುಗೊಂಡಿದ್ದ ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ 2 ಖಾತೆಯನ್ನು ಕಾರಜೋಳ ಅವರಿಗೆ ನೀಡಲಾಗಿದೆ.  ಈ ಬಗ್ಗೆ ಸಿಎಂ ಜೊತೆ ಮಾತನಾಡಿರುವ ಕಾರಜೋಳ, ನನಗೆ ಒಂದೇ ಖಾತೆ ಸಾಕಾಗಿತ್ತು ಎಂದಿದ್ದರು. ಅದಕ್ಕೆ ಸಿಎಂ ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದರು. 
 

Video Top Stories