ದಾವಣಗೆರೆಯಲ್ಲಿ ಸಿದ್ದರಾಮೋತ್ಸವ: ಸಮಾವೇಶದ ಹಿಂದೆ ದುರುದ್ದೇಶ ಎಂದು ಡಿಕೆಶಿ ಬಣದ ವಿರೋಧ

ಆಗಸ್ಟ್‌ 3ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ (Siddaramaiah) ಅವರ ಜನುಮ ದಿನದ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ (Davanagere) ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ.  ಈ ಸಮಾವೇಶಕ್ಕೆ ಸಿದ್ದರಾಮಯ್ಯ- ಡಿಕೆಶಿ ಬಣದ ನಡುವೆ ಅಸಮಾಧಾನ ಎದ್ದಿದೆ.

First Published Jun 30, 2022, 11:49 AM IST | Last Updated Jun 30, 2022, 12:56 PM IST

ಬೆಂಗಳೂರು (ಜೂ. 30): ಆಗಸ್ಟ್‌ 3ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ (Siddaramaiah) ಅವರ ಜನುಮ ದಿನದ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ (Davanagere) ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ.  ಈ ಸಮಾವೇಶಕ್ಕೆ ಸಿದ್ದರಾಮಯ್ಯ- ಡಿಕೆಶಿ ಬಣದ ನಡುವೆ ಅಸಮಾಧಾನ ಎದ್ದಿದೆ. ಈ ಸಮಾವೇಶದ ಹಿಂದೆ ದುರುದ್ದೇಶವಿದೆ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬಿಂಬಿಸುವ ಉದ್ದೇಶ ಇದು, ವ್ಯಕ್ತಿ ವೈಭವಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ತಪ್ಪು  ಎನ್ನುತ್ತಿದೆ ಡಿಕೆಶಿ ಬಣ. 

ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನ, ಉಳಿದಿರೋದು ಶಿವಸೇನೆಯ ಭವಿಷ್ಯದ ಬಗ್ಗೆ ಕುತೂಹಲ!

ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತದೆ, ಸಿಎಂ ಆಗಲು ನಮ್ಮ ಬಹುತೇಕ ನಾಯಕರಿಗೆ ಆಸೆ ಇದೆ, ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುವುದು ಸರಿಯಲ್ಲ' ಎಂದು ಡಿಕೆ ಸುರೇಶ್ ಹೇಳಿದ್ದಾರೆ.