
ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಸಂಘರ್ಷ ತಾರಕಕ್ಕೇರಿದೆ. ಈ ಜೋಡೆತ್ತುಗಳ ಜಟಾಪಟಿಯನ್ನು ನಿಲ್ಲಿಸಲು ಹೈಕಮಾಂಡ್ ವಿಫಲವಾಗಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ನಾಯಕರೇ ಸಂಧಾನಕ್ಕೆ ಮುಂದಾದಂತೆ ಕಾಣುತ್ತಿದೆ.
ಸಿದ್ದು-ಡಿಕೆ ಪ್ರಚಂಡ ಶಕ್ತಿಗೆ ಹೆದರಿತಾ ಹೈಕಮಾಂಡ್..? ಸಂಧಾನ ಮಂತ್ರ.. ಅಸ್ಪಷ್ಟ ಸೂತ್ರ.. ಅತಂತ್ರ ತಂತ್ರ..! ಕರುನಾಡ ಜೋಡೆತ್ತು ಶಕ್ತಿಗೆ ಹೈಕಮಾಂಡ್ ಥಂಡಾ..! ಅಗ್ರಜ.. ಅಧಿನಾಯಕನಿಗೆ ಶುರುವಾಗಿದ್ಯಾ ‘ಆ’ ಭಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಹೈಕಮಾಂಡ್ ಅಲ್ಲಾ ಲೋ ಕಮಾಂಡ್