'ಅವರಿಗೂ ನ್ಯೂಸ್‌ ಬೇಕಲ್ಲ ಮಾತನಾಡುತ್ತಾರೆ': ಹೆಚ್‌ಡಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಉತ್ತರ ಕೊಡಲು ಹೋಗಲ್ಲ. ಸರ್ಕಾರ ಇರುತ್ತೆ, ಹೋಗುತ್ತೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

First Published Jul 18, 2023, 12:11 PM IST | Last Updated Jul 18, 2023, 12:11 PM IST

ಬೆಂಗಳೂರು: ಕಾಂಗ್ರೆಸ್‌ (Congress) ಮಹಾಘಟಬಂಧನ್‌ ಸಭೆಗೆ ಬರುವ ರಾಜಕಾರಣಿಗಳ ಸ್ವಾಗತಕ್ಕೆ ಐಎಎಸ್‌ ಅಧಿಕಾರಿಗಳನ್ನು(IAS Officers) ಬಳಸಿಕೊಂಡಿರುವುದಕ್ಕೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಟ್ವೀಟ್‌ ಕಿಡಿಕಾರಿದ್ದಾರೆ. ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಐಎಎಸ್ ಅಧಿಕಾರಿಗಳನ್ನ ಬಳಸಿಕೊಂಡಿರುವುದನ್ನು ತೀವ್ರವಾಗಿ ಅವರು ಖಂಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DCM DK Shivakumar), ಕುಮಾರಸ್ವಾಮಿಗೆ ಉತ್ತರ ಕೊಡಲು ಹೋಗಲ್ಲ. ಫ್ರೋಟೋಕಾಲ್‌ನಲ್ಲಿ ಯಾರಿರಬೇಕೋ ಅವರೇ ಇರುತ್ತಾರೆ. ಪಾಪ ಕುಮಾರಣ್ಣ ಮಾತನಾಡುತ್ತಾರೆ. ಅವರಿಗೂ ನ್ಯೂಸ್‌ ಬೇಕಲ್ಲ. ಎನ್‌ಡಿಎ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಸುರತ್ಕಲ್ ಬೀಚ್‌ನಲ್ಲಿ ಅಪರೂಪದ ಮೀನು ಪತ್ತೆ: ಕಪ್ಪು ಚುಕ್ಕೆಗಳಿಂದ ಹಾವಿನಂತಿರುವ ಮೀನು..!