Asianet Suvarna News Asianet Suvarna News

ಬರೀ ಹೇಳಿಕೆ ಬೇಡ, ಕೂಡ್ಲೇ ತನಿಖೆ ಮಾಡಿ, ಸಿಐಡಿ- ಇಡಿಗೆ ವಹಿಸಿ: ಸರ್ಕಾರಕ್ಕೆ ಡಿಕೆಶಿ ಸವಾಲ್

ಕೇವಲ ಸ್ಟೇಟ್ಮೆಂಟ್‌ ಮಾಡದೆ ತನಿಖೆಯನ್ನ ಮಾಡಲಿ, ಹಗ್ಗ, ಸರಪಳಿ ಬೇಕಿದ್ದರೆ ಕಳುಹಿಸುವೆ ಅಂತ ವ್ಯಂಗ್ಯವಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 

Aug 20, 2022, 10:15 AM IST

ಬೆಂಗಳೂರು(ಆ.20):  ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ಒಳಒಪ್ಪಂದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ತಡ ಮಾಡದೆ ಸರ್ಕಾರ ತನಿಖೆ ಮಾಡಲಿ ಅಂತ ಸವಾಲ್‌ ಹಾಕಿದ್ದಾರೆ. ಕೇವಲ ಸ್ಟೇಟ್ಮೆಂಟ್‌ ಮಾಡದೆ ತನಿಖೆಯನ್ನ ಮಾಡಲಿ, ಹಗ್ಗ, ಸರಪಳಿ ಬೇಕಿದ್ದರೆ ಕಳುಹಿಸುವೆ ಅಂತ ವ್ಯಂಗ್ಯವಾಡಿದ್ದಾರೆ. ಸಿಬಿಐ, ಇ.ಡಿ ಗಾದರೂ ವಹಿಸಿ ತನಿಖೆ ಮಾಡಲಿ, ಸರ್ಕಾರದವರು ನನ್ನ ಕಟ್ಟಿ ಹಾಕ್ತಾರಾ ಹಾಕಲಿ ಅಂತ ಹೇಳಿದ್ದಾರೆ. 

ಶ್ರೀಗಳ ಬಳಿ ನೋವು ತೋಡಿಕೊಂಡಿಲ್ಲ, ಘಟನೆ ಬಗ್ಗೆ ವಿವರಿಸಿದ್ದೇನೆ ಅಷ್ಟೇ: ಸಿದ್ದು