'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ..' ಗ್ಯಾರಂಟಿ ಬಗ್ಗೆ ಡಿಕೆಶಿ ಕೊಂಕು!

ವಿಧಾನಸಭೆ ಚುನಾವಣೆಗೂ ಮುನ್ನ ಎಲ್ಲರಿಗೂ ಫ್ರೀ, ಎಲ್ಲರಿಗೂ ದುಡ್ಡು ಎಂದು ಹೇಳಿದ್ದ ಕಾಂಗ್ರೆಸ್‌ ಅಧಿಕಾರಕ್ಕೇರಿದ ಬಳಿಕ ವರಸೆ ಬದಲಾಯಿಸುವ ಲಕ್ಷಣ ತೋರಿದೆ. ಈ ನಡುವೆ ಡಿಕೆ ಶಿವಕುಮಾರ್ ಹೇಳಿರುವ ಮಾತು ವಿವಾದಕ್ಕೆ ಕಾರಣವಾಗಿದೆ

First Published May 20, 2023, 8:22 PM IST | Last Updated May 20, 2023, 8:22 PM IST

ಬೆಂಗಳೂರು (ಮೇ.20): ಗ್ಯಾರಂಟಿಗಳ ಮೇಲೆಯೆ ಅಧಿಕಾರ ಹಿಡಿದ ಕಾಂಗ್ರೆಸ್‌ ಪಕ್ಷ, ಶನಿವಾರ ನಡೆದ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ತನ್ನೆಲ್ಲಾ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಇದು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿರುವ ಮಾತಿ ವಿವಾದಕ್ಕೆ ಕಾರಣವಾಗಿದೆ.

ಕ್ಯಾಬಿನೆಟ್‌ ಸಭೆ ಮುಗಿಸಿ ಗ್ಯಾರಂಟಿ ನಿರ್ಧಾರದ ಕುರಿತಾಗಿ ಘೋಷಣೆ ಮಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, 'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ' ಎಂದು ಮಾಧ್ಯಮದವರಿಗೆ ಕೊಂಕಾಗಿ ಪ್ರಶ್ನೆ ಮಾಡಿದ್ದಾರೆ. ಚುನಾವಣೆಯ ವೇಳೆ ಎಲ್ಲರಿಗೂ ಗ್ಯಾರಂಟಿ ಕೊಡೋದಾಗಿ ಸ್ವತಃ ಡಿಕೆ ಶಿವಕುಮಾರ್‌ ಅವರೇ ಹೇಳಿದ್ದರೆ, ಸುದ್ದಿಗೋಷ್ಠಿಯಲ್ಲಿ ಮಾತ್ರ ಎಲ್ಲಾ ವಿವರಗಳನ್ನು ಪಡೆದು ಅರ್ಹರಿಗೆ ಮಾತ್ರವೇ ಗ್ಯಾರಂಟಿ ನೀಡುವ ಮಾತನಾಡಿದ್ದಾರೆ.

ತಾತ್ವಿಕ ಒಪ್ಪಿಗೆಯ ಕಾಂಗ್ರೆಸ್‌ ಗ್ಯಾರಂಟಿಗೆ ಬೊಮ್ಮಾಯಿ ಟೀಕೆ 'ಮನಸ್ಸಿದ್ದರೆ ಮಾರ್ಗ, ಇಲ್ಲದೆ ಇದ್ದರೆ ನೆಪ'!

ಚುನಾವಣೆಯಲ್ಲಿ ನಿಮ್ಮ ಭಾಷಣದಲ್ಲಿ ಎಲ್ಲವೂ ಉಚಿತ ಅಂತಾ ಹೇಳಿದ್ರಲ್ಲ, ಅದೇನಾಯ್ತು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿದ ಡಿಕೆ ಶಿವಕುಮಾರ್‌, 'ಅದೇ ಅದೇ..' ಎಂದು ಹೇಳುತ್ತಾ ಹಾರಿಕೆಯ ಉತ್ತರ ನೀಡಿದರು.

Video Top Stories