ಸಿದ್ದರಾಮಯ್ಯ ಬಣದ ಮೇಲೆ ಕಡಿಮೆಯಾಗದ ಸಿಟ್ಟು: ಹಲವು ಶಾಸಕರಿಗೆ ಡಿಕೆಶಿ ಶಾಕ್!

ಭಾರತ್ ಜೋಡೋ ಯಾತ್ರೆ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಬಣಕ್ಕೆ ಶಾಕ್ ಕೊಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರ ಮೇಲೆ ಸಿಟ್ಟು ತೀರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆಪ್ಟೆಂಬರ್.19): ಭಾರತ ಐಕ್ಯತಾ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮ್ಮ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಯ ಕ್ರೆಡಿಟ್‌ ಮೂಲಕ ಸಿದ್ದರಾಮೋತ್ಸವಕ್ಕೆ ಟಾಂಗ್ ಕೊಡಲು ಮುಂದಾಗಿದ್ದಾರೆ.

ಟಿಕೆಟ್ ಇಲ್ಲ ಎನ್ನುವ ಡಿಕೆಶಿ ವಾರ್ನಿಂಗ್‌ಗೆ ಹಲವು ಶಾಸಕರ ಅಸಮಾಧಾನ!

ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಗಳಲ್ಲಿ ಸಿದ್ದರಾಮಯ್ಯನವರ ಬೆಂಬಲಿರನ್ನು ಕಡೆಗಾಣಿಸುತ್ತಿದ್ದಾರೆ. ಅಲ್ಲದೇ ಸಿದ್ದು ಬೆಂಬಲಿಗೆ ಟೀಮ್‌ಗೆ ಪರೋಕ್ಷವಾಗಿ ಎಚ್ಚರಿಕೆಗಳನ್ನು ಸಹ ನೀಡುತ್ತಿದ್ದಾರೆ. ಇಷ್ಟಾದರೂ ಡಿಕೆ ಶಿವಕುಮಾರ್‌ಗೆ ಸಿಟ್ಟು ಕಡಮೆಯಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಡಿಕೆ ಶಿವಕುಮಾರ್, ಸಿದ್ದು ಬಣದ ಶಾಸಕರಿಗೆ ಯಾವುದೇ ಸಮಿತಿಯ ಜವಾಬ್ದಾರಿ ನೀಡಲ್ಲ.

Related Video