Suvarna Special: ಕನಕಾಧಿಪತಿಯ ಸಿಂಹಾಸನ ಕನಸಿಗೆ ಜಾತಿ ಮಹಾಶಕ್ತಿ!

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ಬಲಿಷ್ಠ ಒಕ್ಕಲಿಗ ಬಣ ನಿಂತಿದ್ದು, ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.13): ಪಟ್ಟ.. ಪಟ್ಟು.. ಏಟು.. ಏದಿರೇಟು..ದಾಳ..ಪ್ರತಿದಾಳ.. ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಯ ಸುತ್ತಲೂ ಸಿದ್ಧವಾಗ್ತಿರೊದು ಸಮರ ಅಖಾಡ. ಸಿದ್ದರಾಮಯ್ಯ ಸೇನೆ ಒಂದು ಕಡೆ ಬಲಿಷ್ಠವಾಗಿ ನಿಂತಿದೆ. ಕುರ್ಚಿ ಉಳಿಸಿಕೊಳ್ಳೋಕೆ ತಯಾರಿ ಶುರು ಮಾಡಿದೆ. 

ಆದರೆ, ಇನ್ನೊಂದು ಕಡೆ ಒಬ್ಬಂಟಿಯಾಗಿ, ಒಂಟಿ ಸಲಗದಂತೆ ನಿಂತಿರೋದು ಡಿ.ಕೆ.ಶಿವಕುಮಾರ್. ಆದರೀಗ ಈ ಒಂಟಿ ಸಲಗದ ಹಿಂದೆ ನೂರಾನೆ ಬಲ ಇರೋ ಒಂದು ಬಲಿಷ್ಠ ಒಕ್ಕಲಿಗ ಬಳಗ ಬಂದು ನಿಂತಿದೆ. ಡಿಕೆ ಪರವಾಗಿ ಆ ಬಳಗ ಅಖಾಡ ಪ್ರವೇಸಿದೆ. ಈ ಎಂಟ್ರಿಯಿಂದ ಕಾಂಗ್ರೆಸ್ನೊಳಗೆ ಶುರುವಾಗಿರುವ ಅಧಿಕಾರ ಹಂಚಿಕೆಯ ಕಾದಾಟ ಯಾವೆಲ್ಲಾ ರೂಪಗಳನ್ನ ಪಡೆದುಕೊಳ್ಳಬಹುದು ಅನ್ನೋದೇ ಸದ್ಯದ ಕುತೂಹಲ.

News Hour: ‘ಕೈ’​ ಸಂಗ್ರಾಮ.. ತಾತ್ಕಾಲಿಕ ವಿರಾಮ!

ಒಟ್ಟಾರೆ, ಕಾಂಗ್ರೆಸ್ ಕೋಟೆಯನ್ನ ಅಧಿಕಾರ ಹಂಚಿಕೆಯ ಅಗ್ನಿ ಸುಡುತ್ತಿದೆ. ಸಭೆ ನಡೆಸೋರ ವಿರುದ್ಧ ಮತ್ತೊಮ್ಮೆ ಬಂಡೆ ಸಿಡಿದೆದಿದ್ದಾರೆ. ಹೈಕಮಾಂಡ್ ಅಸ್ತ್ರ ನಮ್ಮ ಜೊತೆಗೂ ಇದೆ ಎಂದು ಸುದ್ದು ಪಡೆ ಸವಾಲು ಹಾಕಿದೆ. ಭವಿಷ್ಯದ ಅಧಿಕಾರಕ್ಕೆ ಈಗಲೇ ಒಳಬೇಗುದಿ ಶುರುವಾಗಿದೆ.

Related Video