
Bitcoin Scam: ಮೋದಿ ಮುಂದೆ ಸಿಎಂ ಯಾಕೆ ಬಿಟ್ ಕಾಯಿನ್ ಪ್ರಸ್ತಾಪಿಸಿದ್ರು? ಡಿಕೆಶಿ ಪ್ರಶ್ನೆ
ಬಿಟ್ ಕಾಯಿನ್ ಬಗ್ಗೆ ಮೋದಿ ತಲೆಕೆಡಿಸಿಕೊಳ್ಳಬೇಡಿ ಎಂದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಸಿಎಂ ಬಸವರಾಜ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು/ನವದೆಹಲಿ, (ನ.11): ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಬಿಟ್ಕಾಯಿನ್ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚೆಯಾಗಿಲ್ಲ, ನಾನೇ ಪ್ರಸ್ತಾಪಿಸಲು ಯತ್ನಿಸಿದಾಗ ಮೋದಿಯವರು ತಡೆದರು, ಬಿಟ್ ಕಾಯಿನ್ ಬಗ್ಗೆ ನನಗಿಂತ ಹೆಚ್ಚಿನ ಮಾಹಿತಿ ಅವರಿಗಿದೆ. ಇದೆಲ್ಲವೂ ಸಹಜ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿಎಂ-ಪಿಎಂ ಭೇಟಿ: ಬೊಮ್ಮಾಯಿ, ನರೇಂದ್ರ ಮೋದಿ ಮಧ್ಯೆ ಮಹತ್ವದ ಮಾತುಕತೆ
ಇನ್ನು ಮೋದಿ ತಲೆಕೆಡಿಸಿಕೊಳ್ಳಬೇಡಿ ಎಂದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಸಿಎಂ ಬಸವರಾಜ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದಾರೆ.