Asianet Suvarna News Asianet Suvarna News

RR ನಗರ ಒಕ್ಕಲಿಗ ಕೋಟೆಯಲ್ಲಿ ಡಿಕೆಶಿ, ಕುಮಾರಣ್ಣ ಯುದ್ಧ ಶುರು

Oct 13, 2020, 2:34 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಅ. 13): ರಾಜರಾಜೇಶ್ವರಿ ನಗರ ಉಪಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಕಾಂಗ್ರೆಸ್‌ನಿಂದ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದ್ದು, ಚುನಾವಣಾ ರಣತಂತ್ರ ಹೆಣೆಯುವಲ್ಲಿ ಡಿಕೆಶಿ ಬ್ಯುಸಿಯಾಗಿದ್ದಾರೆ. 

ಯೋಗೇಶ್ ಗೌಡ ಹತ್ಯೆ, ಮಾಜಿ ಡಿಸಿಎಂಗೆ ಸಿಬಿಐ ತನಿಖೆಲ ಮುಳುವಾಯ್ತು ಒಂದು ಹೇಳಿಕೆ!

ಆರ್‌ ಆರ್‌ ನಗರ ಹೇಳಿ ಕೇಳಿ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರ. ಒಕ್ಕಲಿಗ ಕೋಟೆಯಲ್ಲಿ ಡಿಕೆಶಿ V/S ಕುಮಾರಸ್ವಾಮಿ ಯುದ್ಧ ಶುರುವಾಗಿದೆ. ಡಿಕೆಶಿ ಹೆಸರು ಕೇಳಿದರೆ ಸಾಕು ಕುಮಾರಣ್ಣ ಉರಿದು ಬೀಳುತ್ತಾರೆ. ಇನ್ನೊಂದು ಕಡೆ ಡಿಕೆಶಿ ಕುಸುಮಾ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.