ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಡಿದಾಟದ ನಡುವೆ ಎಂಟ್ರಿ ಕೊಟ್ಟ ಸಿ.ಪಿ. ಯೋಗೇಶ್ವರ

ಬೊಂಬೆನಾಡು ಚನ್ನಪಟ್ಟಣದಲ್ಲಿ ಅಸಲಿ ಬೊಂಬೆಯಾಟ ಈಗ ಶುರುವಾಗಿದೆ. ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ಬಡಿದಾಟದ ಮಧ್ಯ ಸಿ.ಪಿ. ಯೋಗೇಶ್ವರ್ ಒಳನುಸುಳಿದ್ದಾರೆ.

Share this Video
  • FB
  • Linkdin
  • Whatsapp

ಚನ್ನಪಟ್ಟಣ ರಣರಂಗದಲ್ಲಿ ‘ಪಗಡೆ’ ಉರುಳಿಸಿದ ಅಂದರ್-ಬಾಹರ್ ಆಟದ ನಿಸ್ಸೀಮ..! ಕುಮಾರಸ್ವಾಮಿ ಹಾದಿಗೆ ಮುಳ್ಳಾಗ್ತಾರಾ ಚನ್ನಪಟ್ಟಣ ಸೈನಿಕ..? ಮತ್ತೊಂದು 'ಬೊಂಬೆಯಾಟ'ಕ್ಕೆ ಮುಹೂರ್ತವಿಟ್ಟ ಆಯಾ ರಾಮ್, ಗಯಾ ರಾಮ್ ಚದುರಂಗದ ಚತುರ.. ಸಿಪಿ ಯೋಗೇಶ್ವರ. ಚನ್ನಪಟ್ಟಣ ಬೈ ಎಲೆಕ್ಷನ್'ನಲ್ಲಿ ಯೋಗೇಶ್ವರ್ ಬಂಡಾಯ ಫಿಕ್ಸಾ..? ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಲು ಹೊರಟಿರೋ ಯೋಗೇಶ್ವರ್'ಗೆ ಟಿಕೆಟ್ ಕೈತಪ್ಪಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಗ್ಯಾರಂಟಿನಾ..? ಅವರ ರಾಜಕೀಯ ಚರಿತ್ರೆಯೇ ಈ ಪ್ರಶ್ನೆಗೆ ಉತ್ತರ ಕೊಡ್ತಾ ಇದೆ. ಅಷ್ಟಕ್ಕೂ ಏನದು ಸೈನಿಕನ ರಾಜಕೀಯ ಚರಿತ್ರೆ..? ಚನ್ನಪಟ್ಟಣ ಚಕ್ರವ್ಯೂಹ ಭೇದಿಸಲು ಹೊರಟು ನಿಂತಿರೋ ಕನಕಪುರ ಬಂಡೆಗೆ ಸೈನಿಕನ ಈ ಹೆಜ್ಜೆ ಪ್ಲಸ್ಸಾ, ಮೈನಸ್ಸಾ..? ಕಾದು ನೊಡಬೇಕಿದೆ. 

ಚನ್ನಪಟ್ಟಣ ಗೆಲ್ಲಲು ಒಂದ್ಕಡೆ ಡಿಕೆ ರಣತಂತ್ರ..., ಚನ್ನಪಟ್ಟಣವನ್ನು ಉಳಿಸಿಕೊಳ್ಳಲು ಎಚ್ಡಿಕೆ ತಂತ್ರ.. ಡಿಕೆ-ಎಚ್ಡಿಕೆ ಮಹಾಯುದ್ಧದ ಮಧ್ಯೆ ಸೈನಿಕನ ನಿಗೂಢ ಹೆಜ್ಜೆ.. ಟಿಕೆಟ್ ಸಿಗದೇ ಇದ್ರೆ, ಬೈ ಎಲೆಕ್ಷನ್'ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತೇನೆ ಅಂತ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಹಾಗಾದ್ರೆ ಸೈನಿಕ ಬಂಡಾನ ಫಿಕ್ಸಾ..? ಈ ಪ್ರಶ್ನೆಗೆ ಉತತರ ಕೊಡ್ತಾ ಇದೆ ಚನ್ನಪಟ್ಟಣ ಸೈನಿಕನ ಅದೊಂದು ರೋಚಕ ರಾಜಕೀಯ ಚರಿತ್ರೆ..? ಡಿಕೆ-ಎಚ್ಡಿಕೆ ಇಬ್ಬರಿಗೂ ತಲೆನೋವಾಗಿರೋ ಆ ಚರಿತ್ರೆಯ ಅಸಲಿ ಕಥೆ ಇಲ್ಲಿದೆ ನೋಡಿ. ದೋಸ್ತಿ ಟಿಕೆಟ್ ಕೈ ತಪ್ಪಿದ್ರೆ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ತಾರಾ..? ಒಂದು ವೇಳೆ ಪಕ್ಷೇತರರಾಗಿ ಸ್ಪರ್ಧಿಸಿದ್ರೆ, ಅದ್ರಿಂದ ಕುಮಾರಸ್ವಾಮಿಯವ್ರಿಗೆ ಲಾಭನಾ, ಡಿಕೆಶಿಯವ್ರಿಗೆ ಲಾಭನಾ..? ಚನ್ನಪಟ್ಟಣ ಚದುರಂಗದ ಅಸಲಿ ರಹಸ್ಯ ಇಲ್ಲಿದೆ ನೋಡಿ.

Related Video