ಖಾತೆ ಹಂಚಿಕೆ ಬೆನ್ನಲ್ಲೇ ಮೌನಕ್ಕೆ ಶರಣಾದ ಸಾಹುಕಾರ್, ಮಿತ್ರಮಂಡಳಿಯಲ್ಲಿ ಬಿರುಕು..?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಳೆದೂ ತೂಗಿ ಹಾಲಿ ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡುವ ಮೂಲಕ ಗುರುವಾರ ನೂತನ ಸಪ್ತ ಸಚಿವರಿಗೆ ಖಾತೆಗಳನ್ನು ನೀಡಿದ್ದಾರೆ.
ಬೆಂಗಳೂರು (ಜ. 22): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಳೆದೂ ತೂಗಿ ಹಾಲಿ ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡುವ ಮೂಲಕ ಗುರುವಾರ ನೂತನ ಸಪ್ತ ಸಚಿವರಿಗೆ ಖಾತೆಗಳನ್ನು ನೀಡಿದ್ದಾರೆ. ಆದರೆ ಸಚಿವರಿಗೆ ಇದು ತೃಪ್ತಿ ನೀಡಿಲ್ಲ. ಖಾತೆ ಹಂಚಿಕೆಯಾಗುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ್ದರು. ಸಿಎಂ ವಿರುದ್ಧ ಅಸಮಾಧಾನದ ಮಾತುಗಳನ್ನಾಡಿದ್ದರು. ಎಂಟಿಬಿ, ನಾರಾಯಣ ಗೌಡ, ಗೋಪಾಲಯ್ಯ ಸಿಎಂ ಜೊತೆ ಮತ್ತೆ ಚರ್ಚಿಸುವುದಾಗಿ ಹೇಳಿದ್ದರು. ಅದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ವರಸೆಯನ್ನೇ ಬದಲಾಯಿಸಿದ್ದಾರೆ. ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ಖಾತೆ ಹಂಚಿಕೆಯಾದರೂ ಮುಗಿಯದ ಕಗ್ಗಂಟು, ಬಿಜೆಪಿಗೆ ಸಂಧಾನ, ಸಮಾಧಾನ ದಾರಿಗಳು ನೂರೆಂಟು!
ಇನ್ನೊಂದು ಕಡೆ ಮಿತ್ರಮಂಡಳಿಯ ನಾಯಕ ಎಂದು ಬಿಂಬಿಸಲ್ಪಡುವ ಸಾಹುಕಾರ್ ಜಾರಕೀಹೊಳಿ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ ಖಾತೆ ಹಂಚಿಕೆ ಬೆನ್ನಲ್ಲೇ ಮಿತ್ರಮಂಡಳಿಯಲ್ಲಿ ಬಿರುಕು ಮೂಡಿದೆಯಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್