ರಾಹುಲ್ ಗಾಂಧಿ ಅನರ್ಹ ಪ್ರಕರಣ, ಬಿಜೆಪಿಯಿಂದ ಸರ್ವಾಧಿಕಾರಿಗೂ ಮೀರಿದ ಧೋರಣೆ, ಕಾಂಗ್ರೆಸ್ ಆರೋಪ
ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ. ಈ ಕುರಿತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇತ್ತ ರಾಜ್ಯ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ
ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ಪ್ರಕರಣ ಇದೀಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಈ ನಡೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ. ದೇಶದಿಂದ ಕೊಳ್ಳೆ ಹೊಡೆದು ವಿದೇಶಕ್ಕೆ ಪರಾರಿಯಾದ ಮೂವರು ಹೆಸರು ಹೇಳಿದ ಕಾರಣಕ್ಕೆ ರಾಹುಲ್ ಗಾಂಧಿಯವರು ಸಮಾಜವನ್ನು ಹೇಗೆ ನಿಂದಿಸಿದ್ದಾರೆ. ಇದು ಸಣ್ಣ ಪ್ರಕರಣ ಇದರಲ್ಲಿ ಅನರ್ಹಮಾಡುವಂತೆ ಯಾವುದೇ ಅಂಶಗಳಿಲ್ಲ. ಆದರೆ ಬಿಜೆಪಿ ತ್ವರಿತವಾಗಿ ತಮ್ಮ ಉದ್ದೇಶ ಈಡೇರಿಸಿಕೊಂಡಿದೆ. ಇದು ಬಿಜೆಪಿ ಮಾಡಿದ ಪಿತೂರಿ ಎಂದು ರಾಜ್ಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹಾಗೂ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.