Asianet Suvarna News Asianet Suvarna News

ದೇವೇಗೌಡ್ರ ಭೇಟಿಗೆ ವಿರೋಧ: ಪ್ರೀತಂಗೌಡ್ರನ್ನ ಕರೆದು ಕ್ಲಾಸ್ ತೆಗೆದುಕೊಂಡ ಸಿಎಂ

Aug 10, 2021, 4:49 PM IST

ಬೆಂಗಳೂರು, (ಆ.10): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ್ರ ನಿವಾಸಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡಿದ್ದರು. ಇದು ದಳಪತಿಗಳ ವಿರೋಧಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಸಕ ಪ್ರೀತಂ ಗೌಡ ಇತಿಮಿಯಲ್ಲಿ ಇರಬೇಕು : ಸೋಮಣ್ಣ ವಾರ್ನಿಂಗ್

ಬಳಿಕ ವಸತಿ ಸಚಿವ ವಿ. ಸೋಮಣ್ಣ ಹಾಗೂ ಪ್ರೀತಂ ಗೌಡ ನಡುವೆ ಟಾಕ್ ವಾರ್ ನಡೆದಿದೆ. ಇನ್ನು ಇದೇ ವಿಚಾರವಾಗಿ ಪ್ರೀತಂ ಗೌಡ ಅವರು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದು, ಈ ವೇಳೆ ಪ್ರೀತಂ ಗೌಡ್ರಿಗೆ ಬುದ್ಧಿ ಮಾತುಗಳನ್ನ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.