News Hour: ದೇವೇಗೌಡ ತವರಿನಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ವೇದಿಕೆ; ಹಾಸನದಲ್ಲಿ ನಡೆಯಲಿದ್ಯಾ ಗರ್ವಭಂಗ?

ದೇವೇಗೌಡರ ತವರಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಹಾಸನದಲ್ಲಿ ನಡೆಯಲಿದ್ಯಾ ಗರ್ವಭಂಗ ವಾಕ್ಸಮರ ಅನ್ನೋದು ಮುಂದಿನ ಕುತೂಹಲ

Share this Video
  • FB
  • Linkdin
  • Whatsapp

ಬೆಂಗಳೂರು (ನ.30): ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನ ಪವರ್​​ಫುಲ್​​ ಲೀಡರ್​. ಹೈಕಮಾಂಡ್‌ಗೂ ಫೆವರೆಟ್. ಮೋದಿ ಎದುರಿಸುವ ಶಕ್ತಿ ಇರೋದು ಸಿದ್ದರಾಮಯ್ಯಗೆ ಮಾತ್ರ ಅಂತ ಕಾಂಗ್ರೆಸ್‌ನ ಹಲವು ನಾಯಕರೇ ಹೇಳುತ್ತಾರೆ. ಒಂದರ್ಥದಲ್ಲಿ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ. 

2022ರಲ್ಲಿ ದಾವಣಗೆರೆಯ ಸಿದ್ದರಾಮೋತ್ಸವ ಸಮಾವೇಶ ಸಿದ್ದರಾಮಯ್ಯ ರಾಜಕೀಯ ದಿಕ್ಕನ್ನೇ ಬದಲಿಸಿತ್ತು. ಸಿದ್ದರಾಮಯ್ಯರ ಸಿಎಂ ಕನಸಿಗೆ ಮುನ್ನುಡಿ ಬರೆದಿತ್ತು. ಬಳಿಕ ನಡೆದಿದ್ದಲ್ಲವೂ ಇತಿಹಾಸ. ಈಗ ಅಂಥಾದ್ದೇ ಸಮಾವೇಶಕ್ಕೆ ಹಾಸನ ಸಿದ್ಧವಾಗ್ತಿದೆ.

ವೆಬ್‌ ಸಿರೀಸ್‌ Ranking: ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌, ಓವರ್‌ಹೈಪ್‌ ಯಾವುದು ಅನ್ನೋದನ್ನ ನೋಡಿ!

ಉಪಚುನಾವಣೆಯಲ್ಲಿ ಮೂರು ಕ್ಷೇತ್ರ ಗೆದ್ದು ಫುಲ್​ ಜೋಶ್​ನಲ್ಲಿರುವ ಸಿಎಂ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ರೆಡಿಯಾಗ್ತಿದ್ದಾರೆ. ಸಿದ್ದರಾಮೋತ್ಸವ ಮಾದರಿಯಂತೆ ಡಿಸೆಂಬರ್ 5ಕ್ಕೆ ಹಾಸನದಲ್ಲಿ ಸಿದ್ದರಾಮೋತ್ಸವ ಮಾದರಿಯಲ್ಲೇ ಸ್ವಾಭಿಮಾನ ಸಮಾವೇಶ ನಡೆಯಲಿದೆ. ಉಪ ಚುನಾವಣೆಯಲ್ಲಿ ಗೌಡರು ಸಿಎಂಗೆ ಗರ್ವಭಂಗ ಪ್ರಶ್ನೆ ಮಾಡಿದ್ದರು. ಅದಕ್ಕೆ ತಿರುಗೇಟಿನ ಜೊತೆ ಸಿದ್ದರಾಮಯ್ಯರ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಲಿದೆ. 

Related Video