ಚುನಾವಣಾ ಕಾರ್ಯಕ್ಕೆ KSRTC ಬಸ್‌ಗಳ ನಿಯೋಜನೆ: ಊರಿಗೆ ತೆರಳಲು ಪ್ರಯಾಣಿಕರ ಪರದಾಟ

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ತಟ್ಟಿದ ಎಲೆಕ್ಷನ್‌ ಬಿಸಿ
ಮೆಜೆಸ್ಟಿಕ್‌ನಲ್ಲಿ ಊರಿಗೆ ತೆರಳಲು ಜನರ ಪರದಾಟ
ಚುನಾವಣಾ ಕಾರ್ಯಕ್ಕೆ 3 ಸಾವಿರ ಬಸ್‌ಗಳ ನಿಯೋಜನೆ

First Published May 9, 2023, 5:31 PM IST | Last Updated May 9, 2023, 5:31 PM IST

ಬೆಂಗಳೂರು: ನಾಳೆ ಮತದಾನ ನಡೆಯುತ್ತಿದ್ದು, ಆದ್ರೆ ಊರಿಗೆ ಹೋಗುವವರು ಬಸ್‌ಗಳಿಲ್ಲದೇ ಪರದಾಡುವಂತಾಗಿದೆ. ಚುನಾವಣಾ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳನ್ನು ಪಡೆದುಕೊಳ್ಳಲಾಗಿದೆ. ಮತದಾನ ಮಾಡಲು ನಾಳೆ ಸಾರ್ವತ್ರಿಕ ರಜೆ ಘೋಷಿಸಿರುವುದರಿಂದ ಮತದಾರರು ಇಂದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.ಆದ್ರೆ ಮೆಜೆಸ್ಟಿಕ್‌ನಲ್ಲಿ ಬಸ್‌ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಚುನಾವಣೆಗೆ ಮೂರು ಸಾವಿರಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಬಸ್‌ ಇಲ್ಲದ ಕಾರಣ ಜನ ತಮ್ಮ ಊರುಗಳತ್ತಾ ತೆರಳಲು ಪರದಾಡುವಂತಾಗಿದೆ. ಈಗಾಗಲೇ ಟಿಕೆಟ್‌ ಬುಕ್‌ ಮಾಡಿರುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಇಲ್ಲ. ಆದ್ರೆ ಟಿಕೆಟ್‌ ಬುಕ್‌ ಆಗದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕೋಲಾರದಲ್ಲಿ ಪಕ್ಷೇತರ ಅಭ್ಯರ್ಥಿ ಮೇಲೆ ಮಾಟ ಮಂತ್ರ: ಪ್ರಯೋಗದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Video Top Stories