ಯಮುನಾ ನದಿ ನೀರಿಗೆ ವಿಷ ಹಾಕಿ ದೆಹಲಿಗೆ ಕಳಿಸಿದರಾ?: ಹರಿಯಾಣ BJP ಸರ್ಕಾರದ ವಿರುದ್ಧ ಗಂಭೀರ ಆರೋಪ
ನಾನು ದೆಹಲಿ ಜನರಿಗೆ ಹೇಳಲು ಬಯಸುತ್ತೇನೆ, ಇಂಥ ರಾಜಕಾರಣ ಯಾವತ್ತೂ ಮಾಡಬಾರದು. ಬಿಜೆಪಿಗೆ ಹೇಳ್ತೀನಿ.. ಈ ಹಂತಕ್ಕೆ ದಯವಿಟ್ಟು ಇಳಿಯಬೇಡಿ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಇವರ ಆರೋಪವನ್ನ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ತಳ್ಳಿಹಾಕಿದ್ದಾರೆ.
ಬೆಂಗಳೂರು(ಜ.29): ದೆಹಲಿ ಚುನಾವಣಾ ಅಖಾಡದಲ್ಲಿ ಆರೋಪ- ಪ್ರತ್ಯಾರೋಪ ನಡೆಯುತ್ತಿವೆ. ಉತ್ತರಾಖಂಡದಲ್ಲಿ ಹುಟ್ಟುವ ಯಮುನಾ ನದಿ ಹಿಮಾಚಲದಿಂದ ಹರಿಯಾಣ, ನವದೆಹಲಿ ಬಳಿಕ ಉತ್ತರ ಪ್ರದೇಶಕ್ಕೆ ಬರುತ್ತೆ. ಪ್ರಯಾಗರಾಜ್ನ ಸಂಗಮದಲ್ಲಿ ಗಂಗಾನದಿ ಜತೆ ವಿಲೀನವಾಗುತ್ತದೆ.
ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!
ಹರಿಯಾಣದಲ್ಲಿ ಇರುವ ಬಿಜೆಪಿ ಸರ್ಕಾರ ದೆಹಲಿಗೆ ಬರುವ ಯುಮುನಾ ನದಿಗೆ ವಿಷ ಹಾಕಿದ್ದರು. ದೆಹಲಿ ಜಲ ಬೋರ್ಡ್ ಇಂಜನಿಯರ್ಸ್. ದೆಹಲಿ ಗಡಿಯಲ್ಲೇ ಆ ನೀರನ್ನೂ ತಡೆದಿದ್ದರು. ದೆಹಲಿಯೊಳಗೆ ಆ ನೀರು ಬಾರದಂತೆ ನೋಡಿಕೊಂಡರು, ಆ ನೀರು ದೆಹಲಿಯೊಳಗೆ ಬಂದು ಕುಡಿಯುವ ನೀರಿನಲ್ಲಿ ಹೋಗಿದ್ದರೆ ಆಗ ದೆಹಲಿಯಲ್ಲಿ ಸಾಮೂಹಿಕ ನಾವು ಸಾಯುತ್ತಿದ್ದೆವು. ಈ ನೀರನ್ನೂ ಹರಿಯಾಣದ ಬಿಜೆಪಿ ಸರ್ಕಾರ ದೆಹಲಿಗೆ ಕಳಿಸಿದೆ. ಅದರೊಳಗೆ ಅವರು ಅದೆಂಥಾ ವಿಷ ಹಾಕಿ ಕಳಿಸಿದ್ದಾರೆ ಅಂದ್ರೆ ದೆಹಲಿಯಲ್ಲಿರುವ ವಾಟರ್ ಪ್ಲಾಂಟ್ ಕೂಡ ಸ್ವಚ್ಛ ಆಗಲ್ಲ. ಹೀಗಾಗಿ ದೆಹಲಿಯಲ್ಲಿ ಕುಡಿಯುವ. ನೀರಿನ ಪ್ರಮಾಣ ಕಡಿಮೆಯಾಗಿದೆ. ನಾನೂ ದೆಹಲಿ ಜನರಿಗೆ ಹೇಳಲು ಬಯಸುತ್ತೇನೆ, ಇಂಥ ರಾಜಕಾರಣ ಯಾವತ್ತೂ ಮಾಡಬಾರದು. ಬಿಜೆಪಿಗೆ ಹೇಳ್ತೀನಿ.. ಈ ಹಂತಕ್ಕೆ ದಯವಿಟ್ಟು ಇಳಿಯಬೇಡಿ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಇವರ ಆರೋಪವನ್ನ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ತಳ್ಳಿಹಾಕಿದ್ದಾರೆ.