ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!

ಗುಂಡೇಟು ತಿಂದು ಹೀಗೆ ಹೆಣವಾಗಿ ಬಿದ್ದವನು ತಿಕೋಟಾ ತಾಲೂಕಿನ ಅರಕೇರಿ ತಾಂಡಾ ನಿವಾಸಿ ಸತೀಶ್ ರಾಠೋಡ್. ಅದೇ ತಾಂಡಾದ ರಮೇಶ್​​ ಚವ್ಹಾಣ್​ ಹಾಗೂ ಆತನ ಸಹಚರರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಡೆಡ್ಲಿ ಮರ್ಡರ್​ಗೆ ಕಾರಣವಾಗಿದ್ದು ರಮೇಶ್​ ಚವ್ಹಾಣ್​ ಮಗಳು ಹಾಗೂ ಸುರೇಶ್​ ರಾಠೋಡ್​​ ನಡುವಿನ ಪ್ರೇಮ್​ಕಹಾನಿ. 

Share this Video
  • FB
  • Linkdin
  • Whatsapp

ವಿಜಯಪುರ(ಜ.29):  ಗುಮ್ಮಟನಗರಿಯಲ್ಲಿ ಹಾಡಹಗಲೇ ಗುಂಡಿನ ಸದ್ದು ಮಾರ್ದನಿಸಿದೆ. ಪ್ರೇಮ್​ಕಹಾನಿ ವಿಚಾರವಾಗಿ ಶುರುವಾದ ಕಲಹ ಜೀವವನ್ನೇ ಬಲಿ ಪಡೆದಿದೆ. ಮಗಳ ಸಾವಿಗೆ ವರ್ಷದ ಬಳಿಕ ಅಪ್ಪ ಸೇಡು ತೀರಿಸಿಕೊಂಡಿದ್ದಾನೆ. 

ಭೀಮಾತೀರದ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಹಾಡಹಗಲೇ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ತಿಕೋಟ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಭೀಕರ ಹತ್ಯೆಗೆ ಸಾಕ್ಷಿಯಾಗಿದೆ.
ಗುಂಡೇಟು ತಿಂದು ಹೀಗೆ ಹೆಣವಾಗಿ ಬಿದ್ದವನು ತಿಕೋಟಾ ತಾಲೂಕಿನ ಅರಕೇರಿ ತಾಂಡಾ ನಿವಾಸಿ ಸತೀಶ್ ರಾಠೋಡ್. ಅದೇ ತಾಂಡಾದ ರಮೇಶ್​​ ಚವ್ಹಾಣ್​ ಹಾಗೂ ಆತನ ಸಹಚರರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಡೆಡ್ಲಿ ಮರ್ಡರ್​ಗೆ ಕಾರಣವಾಗಿದ್ದು ರಮೇಶ್​ ಚವ್ಹಾಣ್​ ಮಗಳು ಹಾಗೂ ಸುರೇಶ್​ ರಾಠೋಡ್​​ ನಡುವಿನ ಪ್ರೇಮ್​ಕಹಾನಿ. 

ರಮೇಶ್​ ಚವ್ಹಾಣ್​ ಮಗಳು ಹಾಗೂ ಸತೀಶ್​ ರಾಠೋಡ್​ ಪರಸ್ಪರ ಪ್ರೀತಿ ಮಾಡ್ತಿದ್ರು. ಸತೀಶ್​ ಕುಟುಂಬಸ್ಥರು ರಮೇಶ್ ಚವ್ಹಾಣ್​ ಬಳಿ ಮದುವೆ ಪ್ರಸ್ತಾಪವನ್ನೂ ಮಾಡಿದ್ದರು. ಆದ್ರೆ ಸತೀಶ್​ಗೆ ಮಗಳನ್ನ ಕೊಡಲು ರಮೇಶ್​ ನಿರಾಕರಿಸಿದ್ದ. ಇದೇ ವಿಚಾರವಾಗಿ 2 ಕುಟುಂಬಗಳ ಮಧ್ಯೆ ವೈಷಮ್ಯ ಬೆಳೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ರಮೇಶ್ ಚವ್ಹಾಣ್​ ಮಗಳು ಕಳೆದ ವರ್ಷ ಜನವರಿ 28ರಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ಸತೀಶನೇ ಕಾರಣ ಅಂತಾ ರಮೇಶ್​​ ಸಿಟ್ಟಿಗೆದ್ದಿದ್ದ. ಹೀಗಾಗಿ ಮಗಳ ಮೊದಲ ವರ್ಷದ ತಿಥಿಯಂದೇ ಸತೀಶ್​ ಹತ್ಯೆಗೆ ಮುಹೂರ್ತ ಫಿಕ್ಸ್​ ಮಾಡಿದ್ದ. ಅದ್ರಂತೆ ಇಂದು ಕಾರಿ​ನಲ್ಲಿ ಬರ್ತಿದ್ದಾಗ ಸತೀಶ್​​ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾನೆ.

ಸತೀಶ್​ ರಾಠೋಡ್​ ಹತ್ಯೆಗೈದ ಹಂತಕರು ಆತನ ಶವದ ಮೇಲೆ ಕಂಟ್ರಿಮೇಡ್​ ಪಿಸ್ತೂಲ್​ ಇಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Related Video