ಅಧಿಕಾರ ಹಂಚಿಕೆ ಸೂತ್ರದ ಸತ್ಯ ಬಿಚ್ಚಿಟ್ರಾ ಡಿಸಿಎಂ?: ಡಿ.ಕೆ.ಶಿವಕುಮಾರ್‌ ಸ್ಫೋಟಕ ಹೇಳಿಕೆ

ದಿಲ್ಲಿಯಲ್ಲಿಯೂ ಡೈರೆಕ್ಟ್ ಆಗಿ ಏನೂ ಹೇಳದೇ ಇದ್ರೂ ಮಾರ್ಮಿಕವಾಗಿ ಅನೇಕ ವಿಚಾರಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅದನ್ನ ಯಾರಿಗೆ ಮುಟ್ಟಿಸಬೇಕೋ ಅದನ್ನ ಮುಟ್ಟಿಸೋ ಪ್ರಯತ್ನ ಮಾಡಿದ್ದಾರೆ. 

First Published Dec 4, 2024, 12:43 PM IST | Last Updated Dec 4, 2024, 12:44 PM IST

ಬೆಂಗಳೂರು(ಡಿ.04):  ಕರುನಾಡಲ್ಲಿ ಮೌನ.. ಪ್ರಶ್ನೆಗೆ ಉತ್ತರವಿಲ್ಲ.. ಆ ಬಗ್ಗೆ ಮಾತೇ ಇಲ್ಲ.. ಇಲ್ಲಿ ಹೇಳಲಾಗದ ಸತ್ಯ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸ್ಫೋಟ..ಕೈ ಕೋಟೆಯೊಳಗೆ ಇನ್ನೂ ಆರದ ಕುರ್ಚಿ ಕಿಚ್ಚು.. ಹೈಕಮಾಂಡ್ಗೆ ಸ್ಪಷ್ಟ ಸಂದೇಶ ಕೊಟ್ರಾ ಡಿ.ಕೆ..? ಸಿಎಂ ಪಟ್ಟಕ್ಕಾಗಿ ಹಿಡಿದ ಪಟ್ಟನ್ನ ಸಡಿಲಗೊಳಿಸಿತ್ತಾ ಆ ಒಪ್ಪಂದ..? ಅಧಿಕಾರ ಹಂಚಿಕೆಯ ಸೂತ್ರ ಬಿಚ್ಚಿಟ್ರಾ  ಡಿಸಿಎಂ ಡಿ.ಕೆ.ಶಿವಕುಮಾರ್..? ಇಲ್ಲಿ ಮುಚ್ಚಿಟ್ಟ ಸತ್ಯವನ್ನ ದಿಲ್ಲಿಯಲ್ಲಿಯೇ ಬಿಚ್ಚಿಟ್ಟಿದ್ದು ಯಾಕೆ..? ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್ ಮುಚ್ಚಿಟ್ಟ ಸತ್ಯ ಸ್ಫೋಟ..

ಡಿಕೆಶಿ ಹೆಗಲ ಮೇಲೆ ಸದ್ಯ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಸ್ಥಾನದ ಜವಾಬ್ದಾರಿಯಿದೆ. ಆದ್ರೆ, ಈ ಎರಡೂ ಸ್ಥಾನಗಳ ಮೇಲೆಯೂ ಕೈ ಕೋಟೆಯೊಳಗೆ ಹಲವರ ಕಣ್ಣಿದೆ. ಅಂಥವರಿಗೆ ಸ್ಪಷ್ಟ ಸಂದೇಶವೊಂದನ್ನ ಡಿ.ಕೆ.ಶಿವಕುಮಾರ್ ಕೊಟ್ಟಿದ್ದಾರೆ. ಹಾಗಿದ್ರೆ ಏನಾ ಸಂದೇಶ..? ನನಗೆ ಪಕ್ಷ ಫಸ್ಟ್ ಫ್ಯಾಮಿಲಿ ನೆಕ್ಸ್ಟ್ ಎಂದಿದ್ದೇಕೆ ಡಿ.ಕೆ..? ಬಂಡೆ ಬಾಯಿಂದ ಬಂದ ಮಾತಿನ ಮರ್ಮವೇನು ಅಂತ ತೋರಿಸ್ತೀವಿ. ಆದ್ರೆ, ಅದಕ್ಕೂ ಮುನ್ನ ಸ್ಮಾಲ್ ಬ್ರೇಕ್
ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ.. ಎರಡು ಜವಾಬ್ದಾರಿಗಳನ್ನು ಡಿ.ಕೆ.ಶಿವಕುಮಾರ್ ನಿರ್ವಹಿಸ್ತಾ ಇದ್ದಾರೆ. ಆದ್ರೆ ಈ ಎರಡೂ ಸ್ಥಾನದ ಮೇಲೆಯೂ ಕಾಂಗ್ರೆಸ್ನ ಅನೇಕ ನಾಯಕರ ಕಣ್ಣಿದೆ. ಈ ಎರಡು ಪಟ್ಟಗಳ ಬಗ್ಗೆ ಆಗಾಗ ಚರ್ಚೆಯನ್ನ ಹುಟ್ಟು ಹಾಕ್ತಲೇ ಇರ್ತಾರೆ. ಆದ್ರೀಗ ಅಂಥಹ ಎಲ್ಲಾ ನಾಯರಿಗೂ ಡಿ.ಕೆ.ಶಿವಕುಮಾರ್ ಖಡಕ್ ಸಂದೇಶ ಕೊಟ್ಟಿದ್ದಾರೆ.

ಇನ್ನು ಇದೇ ವೇಳೆ ನನಗೆ ಫಕ್ಷವೇ ಫಸ್ಟ್.. ಫ್ಯಾಮಿಲಿ ನೆಕ್ಸ್ಟ್ ಅಂತಲೂ ಡಿಕೆ ಅಬ್ಬರಿಸಿದ್ದಾರೆ. ಹಾಗಿದ್ರೆ, ಡಿಕೆ ಈ ಮಾತು ಆಡಿದ್ದೇಕೆ ಅಂತ ತೋರಿಸ್ತೀವಿ.  ಕಾಂಗ್ರೆಸ್ ಕಟ್ಟಾಳು ಡಿ.ಕೆ.ಶಿವಕುಮಾರ್ ನನಗೆ ಪಕ್ಷವೇ ಫಸ್ಟ್.. ಫ್ಯಾಮಿಲಿ ನೆಕ್ಸ್ಟ್ ಎಂದು ಅಬ್ಬರಿಸಿದ್ದಾರೆ. ಅಷ್ಟಕ್ಕೂ ಈಗ್ಯಾಕೆ ಈ ಮಾತು..? ಡಿಕೆ ಹೀಗೆ ಹೇಳಿದ್ದಾದ್ರೂ ಯಾಕೆ..?

ದಿಲ್ಲಿಯಲ್ಲಿಯೂ ಡೈರೆಕ್ಟ್ ಆಗಿ ಏನೂ ಹೇಳದೇ ಇದ್ರೂ ಮಾರ್ಮಿಕವಾಗಿ ಅನೇಕ ವಿಚಾರಗಳನ್ನು ಡಿಕೆ ಹೇಳಿದ್ದಾರೆ. ಅದನ್ನ ಯಾರಿಗೆ ಮುಟ್ಟಿಸಬೇಕೋ ಅದನ್ನ ಮುಟ್ಟಿಸೋ ಪ್ರಯತ್ನ ಮಾಡಿದ್ದಾರೆ. 

Video Top Stories