
ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
ಬಿಎಸ್ವೈ ವಿಧಾನಸಭೆಯಲ್ಲಿ ಅವತ್ತು ಡಿ.ಕೆ.ಶಿವಕುಮಾರ್ ಕಾಲೆಳೆದಿದ್ರು.. ಅದನ್ನು ಸವಾಲ್ ಆಗಿ ಸ್ವೀಕರಿಸಿದ್ದ ಕನಕಪುರ ಬಂಡೆ ಪಕ್ಷ ನಿಷ್ಠೆಯನ್ನು ಮೆರೆದ್ರು.. ಪಕ್ಷವನ್ನು ಅಧಿಕಾರಕ್ಕೆ ತಂದ್ರೂ ಖುರ್ಚಿಗಾಗಿ ಆತೊರೆಯಲಿಲ್ಲ.
ಬಿಎಸ್ವೈ ವಿಧಾನಸಭೆಯಲ್ಲಿ ಅವತ್ತು ಡಿ.ಕೆ.ಶಿವಕುಮಾರ್ ಕಾಲೆಳೆದಿದ್ರು.. ಅದನ್ನು ಸವಾಲ್ ಆಗಿ ಸ್ವೀಕರಿಸಿದ್ದ ಕನಕಪುರ ಬಂಡೆ ಪಕ್ಷ ನಿಷ್ಠೆಯನ್ನು ಮೆರೆದ್ರು.. ಪಕ್ಷವನ್ನು ಅಧಿಕಾರಕ್ಕೆ ತಂದ್ರೂ ಖುರ್ಚಿಗಾಗಿ ಆತೊರೆಯಲಿಲ್ಲ.. ಇದೀಗ ರಾಜಯೋಗ.. ನಂಬಿರೋ ಅಜ್ಜಯ್ಯನ ಆಶೀರ್ವಾದ.. ಪ್ರಯಾಗ್ರಾಜ್ ಸಂಕಲ್ಪ.. ಕಾಲಜ್ಞಾನದ ಭವಿಷ್ಯ.. ಎಲ್ಲವೂ ನಿಜವಾಗುತ್ತಾ..? ಇದೇ ಈ ಹೊತ್ತಿನ ವಿಶೇಷ ಬಂಡೆಗಿದ್ಯಾ ರಾಜಯೋಗ. ಸ್ವಾಮಿ ನಿಷ್ಠೆ.. ಪಕ್ಷ ನಿಷ್ಠೆ.. ಡಿಕೆಶಿ ತತ್ವ.. ದಶಕಗಳಿಂದಲೂ ತಾಳ್ಮೆಯಿಂದ ಕಾಯುತ್ತಿರುವ ಡಿಕೆಶಿಗೆ ಈಗ ಸಿಎಂ ಆಗುವ ಎಲ್ಲಾ ಅವಕಾಶಗಳು ಇದೆ.. ಆದ್ರೆ, ಅದಕ್ಕೆ ಸಿಎಂ ಕುರ್ಚಿ ಖಾಲಿ ಆಗಬೇಕಿದೆ.. ಹೈಕಮಾಂಡ್ ಅದಕ್ಕೆ ಅವಕಾಶ ಮಾಡಿಕೊಡಬೇಕಿದೆ.. ಎದೆಲ್ಲಕ್ಕೂ ತಾನು ಮಾಡಿರೋ ದೈವ ಸಂಕಲ್ಪ ಹಾಗೂ ಗುರುಬಲದ ಆಶೀರ್ವಾದ ಸಿಗಬೇಕು.. ಅದು ಸಿಗುತ್ತಾ ಡಿಕೆ ಭವಿಷ್ಯ ಏನು ಹೇಳುತ್ತದೆ.
ಸದ್ಯಕ್ಕೆ ಡಿಕೆಶಿವಕುಮಾರ್ ಭವಿಷ್ಯ ಉಜ್ವಲವಾಗಿ ಕಾಣ್ತಿದೆ.. ಇದಕ್ಕೆ ಕಾರಣ ಅಜ್ಜಯ್ಯನ ಆಶೀರ್ವಾದ.. ಗುರುವಿನ ಬಲ ಚೆನ್ನಾಗಿರೋದ್ರಿಂದ ಸಂಕ್ರಾಂತಿಯೊಳಗೆ ರಾಜಯೋಗವೂ ಒಲಿಯಲಿದೆಯಂತೆ.. ಅದಕ್ಕಾಗಿ ಕನಕಪುರ ಬಂಡೆ ಏನೆಲ್ಲಾ ಮಾಡ್ತಿದ್ದಾರೆ. ಗ್ರಹಗತಿಗಳ ಪ್ರಕಾರ ಸಂಕ್ರಾಂತಿಯೊಳಗೆ ಡಿಕೆಶಿವಕುಮಾರ್ಗೆ ಆ ಒಂದು ರಾಜಯೋಗ ಬರೋದು ಗ್ಯಾರಂಟಿಯಂತೆ.. ಹಾಗಂತ ಯೋಗ ಎಲ್ಲರಿಗೂ ಸುಲಭಕ್ಕೆ ಸಿಗೋದಿಲ್ಲ.. ಕೆಲವರು ಅದನ್ನು ಬೇಡಿ ತೆಗೆದುಕೊಳ್ಳಬೇಕಂತೆ.. ಇನ್ನು ಕೆಲವರದು ಬಲವಂತವಾಗಿ ಪಡೆದುಕೊಳ್ಳಬೇಕಂತೆ.. ಹಾಗಾದ್ರೆ, ಡಿಕೆ ಇದನ್ನು ಹೇಗೆ ಪಡೆದುಕೊಳ್ತಾರೆ ಅದಕ್ಕಾಗಿ ಏನೆಲ್ಲಾ ಮಾಡ್ತಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಬರೋ ಮಠಕ್ಕೂ ಡಿಕೆಗೂ ಏನು ಸಂಬಂಧ.. ಕನಕಪುರದ ಬಂಡೆ ಈ ಗದ್ದುಗೆಯನ್ನು ಅಷ್ಟು ನಂಬೋದಕ್ಕೆ ಏನು ಕಾರಣ.. ಅದ್ರ ಇತಿಹಾಸವೇನು.