ಒಂದೇ ಒಂದು ಪತ್ರ, ಆಟ ಮುಗಿಸಿದ ಕೈ ಚಾಣಾಕ್ಷ: ಸಿದ್ದು ಬಣಕ್ಕೆ ಡಿಕೆಶಿ ಚೆಕ್‌ಮೇಟ್ ಇಟ್ಟದ್ದು ಹೇಗೆ?

ಡಿ.ಕೆ. ಶಿವಕುಮಾರ್ ಪ್ರಚಂಡ ಬುದ್ಧಿವಂತ ರಾಜಕಾರಣಿ. ಯಾವ ದಾಳ ಉರುಳಿಸಿದ್ರೆ, ಯಾವ ಸಾಮ್ರಾಜ್ಯ ಅಲುಗಾಡತ್ತೆ ಅನ್ನೋದನ್ನು ಚೆನ್ನಾಗಿ ಅರಿತವರು. ಅಂಥದ್ದೇ ಒಂದು ದಾಳ ಉರುಳಿಸಿ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಪ್ರಶ್ನಿಸುತ್ತಿದ್ದವರಿಗೆ ಚೆಕ್'ಮೇಟ್ ಇಟ್ಟಿದ್ದಾರೆ ಚಾಣಕ್ಯ.

First Published Dec 3, 2024, 12:52 PM IST | Last Updated Dec 3, 2024, 12:52 PM IST

ಬೆಂಗಳೂರು(ಡಿ.03): ಒಂದೇ ಒಂದು ಪತ್ರ.. ಆಟ ಮುಗಿಸಿದ ‘ಕೈ ಚಾಣಾಕ್ಷ’..! ‘ಸಿದ್ದು ಸ್ವಾಭಿಮಾನಿ’ ಸಮಾವೇಶಕ್ಕೆ ಡಿಕೆ ಸಾರಥ್ಯ..! ಚದುರಂಗದಾಟ.. ‘ಸೈಲೆಂಟ್ ಗೇಮ್’ ಖೇಲ್ ಖತಂ..! ಸಿದ್ದು ಸೇನೆಗೆ ‘ಚೆಕ್’ಮೇಟ್’ ಇಟ್ಟದ್ದು ಹೇಗೆ ಡಿಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಚಾಣಕ್ಯ ಚೆಕ್’ಮೇಟ್.

ಇದು ಚದುರಂಗ... ಡಿ.ಕೆ. ಶಿವಕುಮಾರ್ ಅವ್ರ ಚದುರಂಗ.. ಆ ಚದುರಂಗದಲ್ಲಿ ಕನಕಪುರದ ಚಾಣಕ್ಯ ಇಟ್ಟಿರೋದು ಚತುರ ಚೆಕ್'ಮೇಟ್.. ಅದೂ ಯಾರಿಗೆ..? ಪ್ರಚಂಡ ಬಲದ ಮುಖ್ಯಮಂತ್ರಿ, ಚಾಣಾಕ್ಷರಲ್ಲೇ ಚಾಣಾಕ್ಷ ಸಿದ್ದರಾಮಯ್ಯನವರಿಗೆ.. ಡಿಕೆ ಶಿವಕುಮಾರ್ ಇಟ್ಟಿರೋ ಆ ಚೆಕ್'ಮೇಟ್'ಗೆ ಸಿದ್ದು ಸೇನೆ ಅಕ್ಷರಶಃ ಅದುರಿ ಹೋಗಿದೆ. ಅಷ್ಟಕ್ಕೂ ಏನದು ಚೆಕ್'ಮೇಟ್..? ಯಾಕೆ ಚೆಕ್'ಮೇಟ್, ಯಾವ ಕಾರಣಕ್ಕೆ ಚೆಕ್'ಮೇಟ್, ಎಂಥಾ ಚೆಕ್'ಮೇಟ್..? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.

ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್‌ಗೆ ಬಿಸಿ ತುಪ್ಪ, ರಾಜ್ಯ ನಾಯಕರಿಗೆ ಮೊಸರಿನಲ್ಲಿ ಕಲ್ಲು!

ಸ್ವಾಭಿಮಾನಿ ಸಮಾವೇಶದ ಹಿಂದಿದ್ದ ಉದ್ದೇಶ ಸಿದ್ದರಾಮಯ್ಯನವರ ಏಕಚಕ್ರಾಧಿಪತ್ಯ.. ಆ ಏಕಚಕ್ರಾಧಿಪತ್ಯವನ್ನು ಮುರಿಯುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಇದು ಸಾಧ್ಯವಾಗಿದ್ದು ಹೇಗೆ..?
ಸ್ವಾಭಿಮಾನಿ ಸಮಾವೇಶದ ಹಿಂದಿದ್ದ ಉದ್ದೇಶ ಸಿದ್ದರಾಮಯ್ಯನವರ ಏಕಚಕ್ರಾಧಿಪತ್ಯ.. ಆ ಏಕಚಕ್ರಾಧಿಪತ್ಯವನ್ನು ಮುರಿದಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಮಾವೇಶದ ಹೆಸರಲ್ಲೇ ಬದಲಿಸಿ ಬಿಟ್ಟಿದ್ದಾರೆ. ಹಾಗಾದ್ರೆ ಏನದು ಹೆಸರು..? ಚದುರಂಗದಾಟದಲ್ಲಿ ಸಿದ್ದು ಸೇನೆಗೆ ಚಾಣಕ್ಯ ಇಟ್ಟ ಚೆಕ್'ಮೇಟ್'ನ ಅಸಲಿ ರಹಸ್ಯವನ್ನು ತೋರಿಸ್ತೀವಿ ನೋಡಿ.

ಸಿದ್ದರಾಮಯ್ಯನವರ ಬಣದವರು ಅಂದುಕೊಂಡದ್ದೇ ಒಂದು, ಇಲ್ಲಿ ಆಗಿದ್ದೇ ಒಂದು. ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಿದೆ ಚಾಣಕ್ಯನ ಚೆಕ್'ಮೇಟ್. ಹಾಗಾದ್ರೆ ಸಿದ್ದು ಬಣಕ್ಕೆ ಟಕ್ಕರ್ ಕೊಡಲು ಡಿಕೆಶಿ ಮುಂದಾಗಿದ್ದು ಯಾಕೆ..? 
ಸ್ವಾಭಿಮಾನಿ ಸಮಾವೇಶವೀಗ ಜನಕಲ್ಯಾಣ ಸಮಾವೇಶವಾಗಿ ಬದಲಾಗಿದೆ. ವ್ಯಕ್ತಿಕೇಂದ್ರಿತ ಸಮಾವೇಶವನ್ನ ಪಕ್ಷ ಕೇಂದ್ರಿತವಾಗಿ ನಡೆಸುವಲ್ಲಿ ಡಿಕೆ ಶಿವಕುಮಾರ್ ಸಕ್ಸಸ್ ಆಗಿದ್ದಾರೆ. ಸಿದ್ದು ಬಣದ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಪಲ್ಟಾ ಮಾಡಿದೆ ಚಾಣಕ್ಯನ ಅದೊಂದು ಚೆಕ್'ಮೇಟ್. ಹಾಗಾದ್ರೆ ಸಿದ್ದು ಬಣಕ್ಕೆ ಟಕ್ಕರ್ ಕೊಡಲು ಡಿಕೆಶಿ ಮುಂದಾಗಿದ್ದು ಯಾಕೆ..? 

ಡಿ.ಕೆ. ಶಿವಕುಮಾರ್ ಪ್ರಚಂಡ ಬುದ್ಧಿವಂತ ರಾಜಕಾರಣಿ. ಯಾವ ದಾಳ ಉರುಳಿಸಿದ್ರೆ, ಯಾವ ಸಾಮ್ರಾಜ್ಯ ಅಲುಗಾಡತ್ತೆ ಅನ್ನೋದನ್ನು ಚೆನ್ನಾಗಿ ಅರಿತವರು. ಅಂಥದ್ದೇ ಒಂದು ದಾಳ ಉರುಳಿಸಿ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಪ್ರಶ್ನಿಸುತ್ತಿದ್ದವರಿಗೆ ಚೆಕ್'ಮೇಟ್ ಇಟ್ಟಿದ್ದಾರೆ ಚಾಣಕ್ಯ. 

Video Top Stories