ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್‌ಗೆ ಬಿಸಿ ತುಪ್ಪ, ರಾಜ್ಯ ನಾಯಕರಿಗೆ ಮೊಸರಿನಲ್ಲಿ ಕಲ್ಲು!

ಕರ್ನಾಟಕದ ಬಿಜೆಪಿ ಬಂಡಾಯ ಶಮನ ಯಾರಿಗೂ ಬೇಡವಾಗಿದೆ.  ರಾಜ್ಯ ನಾಯಕರು ಬಡಿದಾಡುತ್ತಿದ್ದರೆ, ಗುಂಪಿಗೆ ಸೇರದವರು ಗೋಲ್ ಸಿಡಿಸಲು ಸಜ್ಜಾಗಿ ನಿಂತಿದ್ದಾರೆ. ಅತ್ತ ಹೈಕಮಾಂಡ್ ನಮ್ಮ ತಲೆನೋವಿನ ನಡುವೆ ನಿಮ್ಮದೇನು ಅಂತಿದ್ದಾರೆ
 

First Published Dec 2, 2024, 11:42 PM IST | Last Updated Dec 2, 2024, 11:42 PM IST

ದೇಶದ ಇತರ ರಾಜ್ಯದ ಬಿಜೆಪಿ ಘಟಕಗಳು ಒಂದು ಗೆರೆ ದಾಟಿದರೂ ಹೈಕಮಾಂಡ್ ಮುಗುದಾರ ಹಾಕಿ ನಿಲ್ಲಿಸುತ್ತದೆ.  ಆದರೆ ಕರ್ನಾಟಕ ಬಿಜೆಪಿ ಹಾಗಲ್ಲ. ಹೈಕಮಾಂಡ್ ಎಷ್ಟೇ ಗಟ್ಟಿಯಾಗಿದ್ದರೂ ರಾಜ್ಯ ಬಿಜೆಪಿ ನಾಯಕರನ್ನು ಹಿಡಿದಿಡುವುದು ಕಷ್ಟ. ಕಳೆದ ಹಲವು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ಬಂಡಾಯ, ಬಡಿದಾಟ, ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವುದು ಸೇರಿದಂತೆ ಹಲವು ಚಟುವಟಿಕೆಗಳು ನಡೆದಿದೆ. ಪ್ರತಿ ಬಾರಿ ಹೈಕಮಾಂಡ್ ಮೂಕಪ್ರೇಕ್ಷರಾಗಿದೆ. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ತಂಡ ಸಿಡೆದೆದ್ದಿದೆ. ರಾಜ್ಯದ ನಾಯಕರು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಎರಡುಬಣಗಳು ಬಡಿದಾಡುತ್ತಿದೆ. ಬಣದಲ್ಲಿ ಗುರುತಿಸಿಕೊಳ್ಳದ ನಾಯಕರು ಹೈಕಮಾಂಡ್‌ನಿಂದ ಹೆಚ್ಚುವರಿ ಜವಾಬ್ದಾರಿ ಸೂಚನೆ ಬರಲಿ ಎಂದು ಕಾಯುತ್ತಿದ್ದಾರೆ. ಇತ್ತ ಹೈಕಮಾಂಡ್ ನಮ್ಮದೇ ಸಾವಿರ ತಲೆನೋವು, ಇದರ ನಡುವೆ ಅಧಿಕಾರನೂ ಇಲ್ಲ, ಉಪಚುನಾವಣೆಯಲ್ಲೂ ಗೆಲುವಿಲ್ಲದ ಕರ್ನಾಟಕದ ಬಂಡಾಯಕ್ಕೆ ತಲೆ ಹಾಕಲು ಮನಸ್ಸು ಮಾಡುತ್ತಿಲ್ಲ. ಇದರ ನಡುವೆ ಯತ್ನಾಳ್‌ಗೆ ನೋಟಿಸ್ ಬಂದಿದೆ.